ನಟ ಸತೀಶ್ ವಜ್ರ ಹತ್ಯೆ ಪ್ರಕರಣ; ಬಾವನಿಗೆ ಸ್ಕೆಚ್ ಹಾಕಿದ ಬಾಮೈದ ಅಂದರ್

Satish-Vajra-Death-TV-Actor-Satish-Vajra-Stabbed-to-Death-Who-Killed-Satish-Cause-Of-Death-Obituary-Funeral-scaled
Published on

ಬೆಂಗಳೂರು: ಯುವ ನಟ ಸತೀಶ್ ವಜ್ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಮೈದ ಸುದರ್ಶನ್ ಹಾಗೂ ನಾಗೇಂದ್ರ ಎಂಬುವರನ್ನ ಪೊಲೀಸರು ಬಂಧಿಸಿದ್ದಾರೆ.

ಸತೀಶ್ ಬಾಮೈದ ಸುದರ್ಶನ್ ನಿಂದಲೇ ಕೊಲೆ ನಡೆದಿದ್ದು, ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನ ಆರ್.ಆರ್ ನಗರ ಪೊಲೀಸರು ಬಂಧಿಸಿದ್ದಾರೆ. ಕೆಲ ತಿಂಗಳ ಹಿಂದೆ ಹೃದಯ ಸಂಬಂಧಿ ಖಾಯಿಲೆಯಿಂದ ಮೃತ ಸತೀಶ್ ಪತ್ನಿ ಸಾವನ್ನಪ್ಪಿದ್ದರು. ತಂಗಿಗೆ ಸರಿಯಾಗಿ ಚಿಕಿತ್ಸೆ ಕೊಡಿಸಿಲ್ಲ ಅಂತಾ ಬಾವನ ಮೇಲೆ ಕೋಪಗೊಂಡಿದ್ದ ಸುದರ್ಶನ್. ಅಲ್ಲದೆ ಸತೀಶ್ ಪತ್ನಿ ಸಾವನ್ನಪ್ಪಿದ ಮೇಲೆ ಮಗು ವಿಚಾರಕ್ಕೆ ಗಲಾಟೆಯಾಗ್ತಿತ್ತು ಎನ್ನಲಾಗಿದೆ.

ಮಗು ಯಾರ ಬಳಿ ಇರಬೇಕು ಅನ್ನೋ ವಿಚಾರಕ್ಕೆ ಬಾವ-ಬಾಮೈದನ ಮಧ್ಯೆ ಜಗಳವಾಗ್ತಿತ್ತು. ನಿನ್ನೆ ರಾತ್ರಿ 10.30ರ ಸುಮಾರಿಗೆ ತನ್ನ ಸಂಬಂಧಿ ನಾಗೇಂದ್ರನನ್ನ ಕರೆದೊಯ್ದಿದ್ದ ಬಾಮೈದ ಸುದರ್ಶನ್, ಈ ವೇಳೆ ಮತ್ತೆ ಮಗು-ತಂಗಿ ಸಾವಿನ ವಿಚಾರವಾಗಿ ಜಗಳ ತೆಗೆದಿದ್ದಾನೆ.

ಜಗಳ ಜೋರಾಗಿ ಸತೀಶ್ ನನ್ನ ಆರೋಪಿ ಸುದರ್ಶನ್ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net