

Rashmika Mandanna: ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಹೈದ್ರಬಾದ್ನಲ್ಲಿ ತಮ್ಮ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇˌ ನಿನ್ನೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡಿರುವ ನಟಿಯ ಉಂಗುರದ ಮೊದಲ ಚಿತ್ರ ಸದ್ಯ ಭಾರೀ ಸದ್ದು ಮಾಡುತ್ತಿದೆ.
ವಿಡಿಯೋದಲ್ಲಿ ರಶ್ಮಿಕಾ ಆಕೆಯ ಪ್ರೀಯಿ ಔರಾನೊಂದಿಗೆ ಮಾತನಾಡುತ್ತಾ, ಚಿತ್ರೀಕರಣದ ಸಮಯದಲ್ಲಿ ನಾನು ಕೇಳಿದ ಮೊದಲ ಹಾಡು ಇದು. ನಾನು ಇನ್ನೂ ಈ ಹಾಡನ್ನು ಪ್ರೀತಿಸುತ್ತಿದ್ದೇನೆ. ಪರದೆಯ ಮೇಲಿನ ಹುಡುಗಿ ನಾನೇ ಎಂದು ಔರಗೆ ತಿಳಿಸುತ್ತಿದ್ದಾಳೆ. ಹಾಗೇ ನಾನು ನಿನ್ನೊಂದಿಗೆ ಈ ಹಾಡನ್ನು ಹಾಡಬೇಕು ಎಂದು ಬಯಸುತ್ತೇನೆ ಎಂದು ವಿಡಿಯೋ ಮೂಲಕ ತಿಳಿಸಿದ್ದಾಳೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬೇಗನೆ ವೈರಲ್ ಆಗಿದ್ದು, ಉಂಗುರವನ್ನು ನೋಡಿದ ನೆಟ್ಟಿಗರು ನಟಿ ಅಧಿಕೃತವಾಗಿ ನಿಶ್ಚಿತಾರ್ಥವನ್ನು ಬಹಿರಂಗಪಡಿಸಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.
ವಿಜಯ್ ಹಾಗೂ ರಶ್ಮಿಕಾ ಅಕ್ಟೋಬರ್ 3 ರಂದು ಕುಟುಂಬ ಸದಸ್ಯರು ಹಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿಸಿಕೊಂಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ನಿಶ್ಚಿತಾರ್ಥದ ನಂತರ, ವಿಜಯ್ ಮೊದಲ ಬಾರಿಗೆ ಸಾರ್ವಜನಿಕವಾಗಿ ನಿಶ್ಚಿತಾರ್ಥದ ಉಂಗುರದೊಂದಿಗೆ ಕಾಣಿಸಿಕೊಂಡಿದ್ದಾರೆ. ಫೆಬ್ರವರಿ 2026 ರಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಈ ಹಿಂದೆ ಗೀತ ಗೋವಿಂದಂ ಹಾಗೂ ಡಿಯರ್ ಕಾಮ್ರಾಡ್ ಇ ಸಿನಿಮಾದಲ್ಲಿ ಇವರಿಬ್ಬರು ಒಟ್ಟಿಗೆ ಅಭಿನಯಿಸಿದ್ದು, ಈ ವೇಳೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಎಲ್ಲೆಡೆ ವದಂತಿ ಹಬ್ಬಿತ್ತು. ಈ ನಿಶ್ಚಿತಾರ್ಥದ ಮಾಡಿಕೊಂಡ ನಂತರ ವದಂತಿಗಳಿಗೆ ಫುಲ್ಸ್ಟಾಪ್ ಇಟ್ಟಿದ್ದಾರೆ.
ಏತನ್ಮಧ್ಯೆ, ರಶ್ಮಿಕಾ ಅವರ ಮುಂದಿನ ಸಿನಿಮಾ' ತಮ್ಮ' ಬಿಡುಗಡೆಗೆ ಸಜ್ಜಾಗುತ್ತಿದ್ದು, ಇದರಲ್ಲಿ ಆಯುಷ್ಮಾನ್ ಖುರಾನಾ, ಪರೇಶ್ ರಾವಲ್ ಮತ್ತು ನವಾಜುದ್ದೀನ್ ಸಿದ್ದಿಕಿ ಅವರೊಂದಿಗೆ ನಟಿಸಿರುವ ಹಾರರ್ ಹಾಸ್ಯ ಚಲನಚಿತ್ರವಾಗಿದೆ. (ಏಜೆನ್ಸೀಸ್)