ಯುಪಿ ಸಿಎಂ ಪಾದ ಮುಟ್ಟಿದ್ದಕ್ಕೆ ಟೀಕೆ;'ಕಾಲಿಗೆ ಬೀಳುವುದು ನನ್ನ ಅಭ್ಯಾಸ' ಎಂದು ಸ್ಪಷ್ಟನೆ ನೀಡಿದ ನಟ ರಜನಿಕಾಂತ್

rajinikanth
Published on

ಮುಂಬೈ: ಸೂಪರ್​​ ಸ್ಟಾರ್ ರಜನಿಕಾಂತ್ ಅವರು ​​ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ವೇಳೆ ಅವರ ಪಾದ ಮುಟ್ಟಿ ನಮಸ್ಕರಿಸಿದ್ದು, ವಿವಾದಕ್ಕೆ ಕಾರಣವಾಗಿತ್ತು. ಈ ಟೀಕೆಗೆ ರಜನಿಕಾಂತ್ ಸ್ಪಷ್ಟನೆ ನೀಡಿದ್ದಾರೆ.

ಜೈಲರ್ ಚಿತ್ರದ ಯಶಸ್ಸಿನಲ್ಲಿರುವ ಸೂಪರ್‌ಸ್ಟಾರ್ ರಜನಿಕಾಂತ್ ಹಿಮಾಲಯ ಪ್ರವಾಸ ಬಳಿಕ ನೇರವಾಗಿ ಉತ್ತರ ಪ್ರದೇಶಕ್ಕೆ ತೆರಳಿದ್ದರು. ಇದೇ ವೇಳೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭೇಟಿಯಾದಿ ಪಾದ ಮುಟ್ಟಿ ನಮಸ್ಕರಿಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

72 ವರ್ಷದ ನಟ 51 ವರ್ಷದ ಸಿಎಂ ಪಾದ ಮುಟ್ಟುವುದು ಸರಿಯೇ ಎಂದು ಹಲವರು ಪ್ರಶ್ನಿಸಿದ್ದಾರೆ. ತನಗಿಂತ ಚಿಕ್ಕವರ ಪಾದ ಮುಟ್ಟಿ ನಮಸ್ಕರಿಸಿದ್ದು ಸರಿಯೇ ಅನ್ನೋ ಪ್ರಶ್ನೆ ಎದಿತ್ತು. ನೆಟ್ಟಿಗರು ಈ ಕುರಿತಾಗಿ ಮಿಶ್ರಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಖುದ್ದು ರಜನಿ ಸ್ಪಷ್ಟನೆ ನೀಡಿದ್ದಾರೆ.

ಸನ್ಯಾಸಿಯಾಗಲಿ, ಯೋಗಿಯಾಗಲಿ ಅವರು ನನಗಿಂತ ಚಿಕ್ಕವರಾದರೂ ಅವರ ಕಾಲಿಗೆ ಬೀಳುವುದು ನನ್ನ ಅಭ್ಯಾಸ ಅದನ್ನೇ ಮಾಡಿದ್ದೇನೆ. ನನ್ನ ಆಚಾರವನ್ನು ಪಾಲಿಸಿದ್ದೇನೆ ಹೊರತು ಇನ್ನೇನು ಮಾಡಿಲ್ಲ ಎಂದು ನಟ ಹೇಳಿದ್ದಾರೆ.

ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾ ಬಾಕ್ಸ್ ಆಫೀಸ್ ಸಖತ್​ ಸೌಂಡ್​​ ಮಾಡುತ್ತಿದೆ. ಇದುವರೆಗೆ ರೂ.500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಮತ್ತೊಂದೆಡೆ ತಲೈವಾಗೆ ಈ ದೊಡ್ಡ ಯಶಸ್ಸು ಸಿಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net