ನಾಳೆ ಬೆಳಗ್ಗೆಯೇ 'ಅಪ್ಪು' ಅಂತ್ಯಕ್ರಿಯೆ ವಿಧಿವಿಧಾನ ಪ್ರಾರಂಭ...

Puneeth
Published on

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆ ನಾಳೆ (ಅ.31) ಕಂಠೀರವ ಸ್ಟುಡಿಯೋನಲ್ಲಿ ನಡೆಯಲಿದ್ದು, ಬೆಳಗ್ಗೆ 5 ಗಂಟೆಗೆ ವಿಧಿವಿಧಾನ ಪ್ರಾರಂಭವಾಗಲಿದೆ ಎಂದು ನಟ ರಾಮ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಬೆಳಗ್ಗೆ ಕುಟುಂಬದವರೆಲ್ಲ ಸೇರಲಿದ್ದು, ನಂತರ ಅಂತ್ಯಕ್ರಿಯೆ ಕಾರ್ಯಗಳು ಪ್ರಾರಂಭಗೊಳ್ಳಲಿವೆ ಎಂದು ಮಾಹಿತಿ ನೀಡಿದ್ದಾರೆ. ಅವನ ಪಯಣ ಸುಖಕರವಾಗಿರಲಿ, ಇಷ್ಟು ವರ್ಷ ನಮ್ಮೆಲ್ಲರನ್ನ ತೃಪ್ತಿದಾಯಕವಾಗಿ ನೋಡಿಕೊಂಡಿದ್ದಾನೆ. ನಾವು‌ ಆತನನ್ನ ಅಷ್ಟೇ ಗೌರವಯುತವಾಗಿ ಕಳಿಸಿಕೊಡಬೇಕು. ಅವನು ತಂದೆಗೆ ತಕ್ಕ ಮಗ ಅಂತ ನಿರೂಪಿಸಿದ್ದಾನೆ‌, ಇಷ್ಟು ಬೇಗ ಹೋಗಬಾರದಿತ್ತು. 40 ವರ್ಷ ಚಿತ್ರರಂಗದಲ್ಲೇ ಕಳೆದಿದ್ದಾನೆ, ನಮ್ಮ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಇರಲಿದ್ದಾನೆ ಎಂದು ಸಂತಾಪ ಸೂಚಿಸಿದ್ದಾರೆ.

ಅಪ್ಪ-ಅಮ್ಮನ ಪಕ್ಕದಲ್ಲೇ ಪುನೀತ್ ಅಂತ್ಯಸಂಸ್ಕಾರ ನಡೆಯಲಿದ್ದು, ಕುಟುಂಬಸ್ಥರು ಮತ್ತು ಅವರ ಆಪ್ತ ವಲಯಕ್ಕೆ ಮಾತ್ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇದೆ.
ಪುನೀತ್ ರಾಜಕುಮಾರ್ ಅವರಿಗೆ ಸಕಲ ಸರ್ಕಾರಿ​ ಗೌರವಗಳೊಂದಿಗೆ ಅಂತ್ಯಕ್ರಿಯೆಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net