ಜಿಮ್ ಮಾಡೋದ್ರಿಂದಾನೆ ಸಾವು ಸಂಭವಿಸುತ್ತೆ ಅನ್ನೋದು ತಪ್ಪು: ನಟ ನೆನಪಿರಲಿ ಪ್ರೇಮ್

1186434
Published on

ಮಂಡ್ಯ: ನಟ ಪುನೀತ್ ರಾಜ್​ಕುಮಾರ್ ಅವರ ನಿಧನಕ್ಕೆ ಜಿಮ್​​ನಲ್ಲಿನ ಅತಿಯಾದ ವರ್ಕೌಟ್ ಕಾರಣ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನಟ ನೆನಪಿರಲಿ ಪ್ರೇಮ್ ಪ್ರತಿಕ್ರಿಯೆ ನೀಡಿದ್ದಾರೆ.

ಪುನೀತ್​ ರಾಜ್​ಕುಮಾರ್​ ನಿಧನದ ಬಳಿಕ, ಹೃದಯಾಘಾತಕ್ಕೂ ಜಿಮ್​ಗೂ ಸಂಬಂಧ ಇದೆ ಎಂದು ಕೆಲವರು ಭಾವಿಸಿದ್ದಾರೆ. ಆ ಕುರಿತು ನಟ ನೆನಪಿರಲಿ ಪ್ರೇಮ್​ ಮಾಹಿತಿ ನೀಡಿದ್ದಾರೆ. ಜಿಮ್​ಗೆ ಹೋಗೋದ್ರಿಂದ ಸಾವು ಸಂಭವಿಸುತ್ತೆ ಅನ್ನೋದು ತಪ್ಪು. ನಮ್ಮ ಶಕ್ತಿ ಮೀರಿ ಹೆಚ್ಚಿನ ವರ್ಕೌಟ್ ಮಾಡಿದರೆ ಆರೋಗ್ಯದಲ್ಲಿ ವ್ಯತ್ಯಾಸ ಆಗುತ್ತದೆ. ಜಿಮ್​​ಗೆ ಹೋಗುವುದರಿಂದ ಆ ರೀತಿ ಆಗುತ್ತೆ ಎನ್ನುವುದು ಸುಳ್ಳು. ಲಕ್ಷಾಂತರ ಜನ ಜಿಮ್​ ನಂಬಿ ಬದುಕುತ್ತಿದ್ದಾರೆ ಎಂದು ಪ್ರೇಮ್​ ಹೇಳಿದ್ದಾರೆ.

ಯಾವುದೇ ಆದರೂ ಅತಿಯಾಗಿ ಒಂದೇ ಸಲ ಮಾಡದೇ, ಹಂತಹಂತವಾಗಿ ಒಂದೇ ಸಲ ಮಾಡಿಕೊಂಡು ಹೋಗಬೇಕು. ಕೆಲವರು ಯಾವುದೋ ಒಂದು ವಿಡಿಯೋ ನೋಡಿ ವರ್ಕೌಟ್ ಮಾಡುತ್ತಾರೆ. ಒಂದೇ ದಿನದಲ್ಲಿ ಫಿಟ್ ಆಗಬೇಕು, ತೂಕ ಇಳಿಸಬೇಕೆಂದು ಕಸರತ್ತು ಮಾಡ್ತಾರೆ ಆಗ ಅಪಾಯ ಎದುರಾಗುತ್ತದೆ ಎಂಬ ಅಭಿಪ್ರಾಯ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net