ಮುಖೇಶ್ ಅಂಬಾನಿ ಕುಟುಂಬ ಭಾರತ ಬಿಟ್ಟು ಬೇರೆಲ್ಲಿಯೂ ಶಿಫ್ಟ್​ ಆಗುವುದಿಲ್ಲ: ರಿಲಯನ್ಸ್ ಸ್ಪಷ್ಟನೆ

ksudgasdh
Published on

ಮುಂಬೈ: ಭಾರತದ ನಂ.01 ಶ್ರೀಮಂತ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ಭಾರತ ಬಿಟ್ಟು ಲಂಡನ್‌ನಲ್ಲಿ ವಾಸಿಸುವ ಸಾಧ್ಯತೆಯಿದೆ ಎಂದು ಹಬ್ಬಿದ್ದ ಸುದ್ದಿಯ ಬಗ್ಗೆ ರಿಲಯನ್ಸ್ ಸ್ಪಷ್ಟನೆ ನೀಡಿದೆ.

ಮುಖೇಶ್ ಅಂಬಾನಿ ಕುಟುಂಬವು ಲಂಡನ್‌ನ ಸ್ಟೋಕ್ ಪಾರ್ಕ್‌ನಲ್ಲಿ ವಾಸಿಸುವ ಯೋಜನೆ ಹಾಕಿಕೊಂಡಿದ್ದಾರೆ ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿತ್ತು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ರಿಲಯನ್ಸ್, ಇದಕ್ಕೆ ಯಾವುದೇ ಆಧಾರವಿಲ್ಲವೆಂದು ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದೆ. ಅಂಬಾನಿ ಮತ್ತು ಅವರ ಕುಟುಂಬವು ಲಂಡನ್ ಅಥವಾ ಪ್ರಪಂಚದ ಬೇರೆಲ್ಲಿಯೂ ಸ್ಥಳಾಂತರಗೊಳ್ಳುವ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತದೆ ಎಂದು ಕಂಪನಿ ಹೇಳಿದೆ.

ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮುಖೇಶ್ ಅಂಬಾನಿ ಅವರು ತಮ್ಮ ಕುಟುಂಬದೊಂದಿಗೆ ಮಹಾರಾಷ್ಟ್ರದ ಮುಂಬೈನ ಆ್ಯಂಟಿಲಿಯಾದಲ್ಲಿ 4,00,000 ಚದರ​ ಅಡಿ ವಿಸ್ತೀರ್ಣದ ನಿವಾಸದಲ್ಲಿ ವಾಸಿಸುತ್ತಿದ್ದಾರೆ. ಅಂಬಾನಿ ಕುಟುಂಬವು ಬಕಿಂಗ್‌ಹ್ಯಾಮ್‌ಶೈರ್‌ನಲ್ಲಿರುವ 300 ಎಕರೆ ಕಂಟ್ರಿ ಕ್ಲಬ್‌, ಸ್ಟೋಕ್ ಪಾರ್ಕ್ ನಲ್ಲಿ ವಾಸಿಸುವ ನಿರೀಕ್ಷೆಯಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net