ಡಾರ್ಲಿಂಗ್​ ಪ್ರಭಾಸ್ ಫೇಸ್​ಬುಕ್​ ಖಾತೆ ಹ್ಯಾಕ್!; ಶಾಕ್​ ಆದ ಫ್ಯಾನ್ಸ್​

Untitled design - 2023-07-28T080112.376
Published on

ಆಂಧ್ರಪ್ರದೇಶ: ಪ್ಯಾನ್ ಇಂಡಿಯಾ ಸ್ಟಾರ್, ಟಾಲಿವುಡ್​​ನ ರೆಬೆಲ್​ ಸ್ಟಾರ್​ ಪ್ರಭಾಸ್ ಅವರ ಅಧಿಕೃತ ಫೇಸ್​​ಬುಕ್​ ಖಾತೆ ಹ್ಯಾಕ್​ ಆಗಿದ್ದು, ಈ ಬಗ್ಗೆ ತಮ್ಮ ಅಭಿಮಾನಿಗಳಿಗೆ ಇನ್​ಸ್ಟಾಗ್ರಾಮ್​ ಮೂಲಕ ಮಾಹಿತಿ ನೀಡಿದ್ದಾರೆ.

ಪ್ರಸ್ತುತ ನಾಗ್ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಸೈನ್ಸ್​-ಫಿಕ್ಷನ್​ ಆಧರಿತ ಕಲ್ಕಿ 2898 ಎಡಿ ಚಿತ್ರದ ಚಿತ್ರೀಕರಣದಲ್ಲಿ ಪ್ರಭಾಸ್​ ನಿರತರಾಗಿದ್ದಾರೆ. ಈ ಮಧ್ಯೆ ಅವರ ಫೇಸ್​​ಬುಕ್​​ ಖಾತೆಯಲ್ಲಿ ಅನುಚಿತ ಚಟುವಟಿಕೆ ಪತ್ತೆಯಾಗಿದ್ದು, ಹ್ಯಾಕ್​ ಆಗಿರುವ ಬಗ್ಗೆ ಮಾಹಿತಿ ದೊರೆತಿದೆ. ಸದ್ಯ ಈ ಸಂಗತಿ ಪ್ರಭಾಸ್​ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ.

ಈ ಕುರಿತು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿದ ಪ್ರಭಾಸ್​, ಸಮಸ್ಯೆಯನ್ನು ಬಗೆಹರಿಸುವಲ್ಲಿ ನನ್ನ ತಂಡ ಮುಂದಾಗಿದೆ. ಶೀಘ್ರವೇ ಪ್ರೊಫೈಲ್​ ಮೇಲೆ ನಿಯಂತ್ರಣ ಪಡೆಯಲು ನಿರಂತರವಾಗಿ ಶ್ರಮಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಸದ್ಯ ಪ್ರಭಾಸ್-ಪ್ರಶಾಂತ್ ನೀಲ್​ ಕಾಂಬಿನೇಷನ್​ನಲ್ಲಿ ತಯಾರಾಗಿರುವ ಸಲಾರ್​ ಚಿತ್ರ ವಿಶ್ವದಾದ್ಯಂತ ಸೆಪ್ಟೆಂಬರ್ 28, 2023 ರಂದು ಬಿಡುಗಡೆಗೊಳ್ಳಲು ಸಜ್ಜಾಗಿದ್ದು, ಈ ಚಿತ್ರದ ಮೇಲೆ ಅಪಾರ ನಿರೀಕ್ಷೆ ವ್ಯಕ್ತವಾಗಿದೆ. ಚಿತ್ರದಲ್ಲಿ ಪ್ರಭಾಸ್​ಗೆ ಜೋಡಿಯಾಗಿ ಶ್ರುತಿ ಹಾಸನ್ ಅಭಿನಯಿಸಿದ್ದಾರೆ. ಕಮಲ್ ಹಾಸನ್, ಅಮಿತಾಬ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net