‘ನನಗೆ ಆ ವಿಷಯ ಈಗ ಬೇಡ' ನನ್ನ ತಂದೆ ಎಲ್ಲಾ ಹೇಳಿದ್ದಾರೆ: ನಾಗ ಚೈತನ್ಯ ಹೀಗ್ಯಾಕೆ ಹೇಳಿದ್ರು ಗೊತ್ತಾ?

Nagachaitanya
Published on

ಹೈದ್ರಾಬಾದ್​​: ಕೆರೆ, ಕಾಲುವೆಗಳ ರಕ್ಷಣೆಗೆ ಸಿಎಂ ರೇವಂತ್ ರೆಡ್ಡಿ ಸ್ಥಾಪಿಸಿರುವ ಹೈಡ್ರಾ ಸಂಸ್ಥೆ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುತ್ತಿರುವುದು ಗೊತ್ತೇ ಇದೆ. ಇತ್ತೀಚೆಗೆ ಮಾದಾಪುರದಲ್ಲಿ ಚಿತ್ರನಟ ನಾಗಾರ್ಜುನ ಮಾಲೀಕತ್ವದ ಎನ್ ಕನ್ವೆನ್ಷನ್ ಸೆಂಟರ್ ಅನ್ನು ಹೈಡ್ರಾ ತಂಡ ಕೆಡವಿತ್ತು. ಈ ಕುರಿತಾಗಿ ನಾಗ ಚೈತನ್ಯ ಮೊದಲ ಬಾರಿಗೆ ಮಾತನಾಡಿದ್ದಾರೆ.

ಈ ಬಗ್ಗೆ ನಾಗಾರ್ಜುನ್ ಈಗಾಗಲೇ ಸಾಕಷ್ಟು ಬಾರಿ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗಷ್ಟೇ ಎನ್ ಕನ್ವೆನ್ಷನ್ ಸೆಂಟರ್ ಧ್ವಂಸ ಕುರಿತು ನಾಗ್ ಪುತ್ರ ಅಕ್ಕಿನೇನಿ ನಾಗ ಚೈತನ್ಯ ಪ್ರತಿಕ್ರಿಯಿಸಿದ್ದರು.

ಇತ್ತೀಚೆಗೆ ಹೈದರಾಬಾದ್ ನ ಹಿಮಾಯತ್ ನಗರದಲ್ಲಿ ಗಾರ್ಮೆಂಟ್ಸ್ ಮಳಿಗೆಯೊಂದರ ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದ ಅವರನ್ನು ಮಾಧ್ಯಮದವರು ಈ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಚೈತನ್ಯ, ‘ನನಗೆ ಆ ವಿಷಯ ಈಗ ಬೇಡ.. ಎನ್ ಕನ್ವೆನ್ಷನ್ ಧ್ವಂಸಕ್ಕೆ ಸಂಬಂಧಿಸಿದಂತೆ ನನ್ನ ತಂದೆ ಟ್ವಿಟರ್ ವೇದಿಕೆಯಲ್ಲಿ ಎಲ್ಲ ವಿವರಗಳನ್ನು ಹೇಳಿದ್ದಾರೆ.

ನಿಮ್ಮ ಮದುವೆ ಹೈದರಾಬಾದ್‌ನಲ್ಲಿಯೇ ನಡೆಯಲಿದೆಯೇ ಎಂದು ಕೇಳಿದಾಗ, ಇನ್ನೂ ನಿರ್ಧರಿಸಲಾಗಿಲ್ಲ ಎಂದು ಹೇಳಿದರು. ಅದು ಯಾವಾಗ, ಎಲ್ಲಿ ನಡೆಯುತ್ತದೆ ಎಂಬುದು ಶೀಘ್ರದಲ್ಲೇ ಎಲ್ಲರಿಗೂ ತಿಳಿಯಲಿದೆ. ಒಳ್ಳೆಯ ಕಥೆಯಿದ್ದರೆ ಜೊತೆಯಾಗಿ ನಟಿಸುತ್ತೇನೆ ಎಂದೂ ಹೇಳಿದ್ದಾರೆ.

ಇದೇ ತಿಂಗಳ 8ರಂದು ನಾಗ ಚೈತನ್ಯ ಹಾಗೂ ಸೋಭಿತಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರಿಬ್ಬರು ಬಹಳ ದಿನಗಳಿಂದ ಗೆಳೆಯರು. ಕೆಲ ದಿನಗಳಿಂದ ಇವರಿಬ್ಬರ ಬಗ್ಗೆ ಹಲವು ವದಂತಿಗಳು ಹರಿದಾಡುತ್ತಿವೆ. ಇತ್ತೀಚಿನ ನಿಶ್ಚಿತಾರ್ಥ ಸಮಾರಂಭದೊಂದಿಗೆ ಅವರು ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಘೋಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net