

ಬೆಂಗಳೂರು: ಕನ್ನಡದ ‘ಮೋಜೋ’, ‘ನಾನು ನನ್ ಜಾನು’, ‘ಯೂಸ್‌ಲೆಸ್ ೆಲೋ’ ಚಿತ್ರಗಳಲ್ಲಿ ನಟಿಸಿದ್ದ ನಾಯಕ ನಟ ಮನು ತಮ್ಮ ನಾಲ್ಕನೇ ಚಿತ್ರ ‘ಮನೋರಮಾ’ಗೆ ಸಿದ್ಧವಾಗುತ್ತಿದ್ದಾರೆ. ‘ಲೂಸಿಯಾ’, ‘ಕೃಷ್ಣನ್ ಲವ್ ಸ್ಟೋರಿ’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಗುರುಸಾವನ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರದ ಸ್ಟ್‌ಲುಕ್ ಬಿಡುಗಡೆಯಾಗಿದೆ. ಚಿತ್ರಕ್ಕೆ ಆಯ್ಕೆಯಾದ್ದ ಬಗ್ಗೆ ಮನು, ‘ನಾನು ಕಳೆದ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ನಟ ಹಾಗೂ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದೇನೆ. ಗುರುಸಾವನ್ ಈ ಕಥೆ ಮಾಡುವಾಗಲೇ ಇದಕ್ಕೆ ನಾನೇ ನಾಯಕ ಎಂಬ ನಿರ್ಧಾರಕ್ಕೆ ಬಂದಿದ್ದರು. ಒಂದು ದಿನ ಕರೆ ಮಾಡಿ, ಈ ಬಗ್ಗೆ ತಿಳಿಸಿದರು. ಇದು ನವೀರಾದ ಪ್ರೇಮಕಥೆಯಾಗಿರುವುದರಿಂದ ನಾನು ಕೂಡ ಒಪ್ಪಿಕೊಂಡೆ. ಸದ್ಯದಲ್ಲಿಯೇ ಚಿತ್ರ ಮುಹೂರ್ತ ಕಾಣಲಿದೆ. ನಾಯಕ ನಟಿ ಆಯ್ಕೆಯಾದ ಬಳಿಕ ಸಿನಿಮಾಕ್ಕಾಗಿ ಕೆಲವು ದಿನ ವರ್ಕ್‌ಶಾಪ್ ಮಾಡಲಿದ್ದೇವೆ. ಇಲ್ಲಿ ಯಂಗ್ ಆಗಿ ಕಾಣಿಸಿಕೊಳ್ಳಬೇಕಿದೆ. ಪಾತ್ರವು ಕೂಡ ಇದನ್ನೇ ಕೇಳುತ್ತದೆ’ ಎನ್ನುತ್ತಾರೆ. ಮನು ಸದ್ಯ ಎರಡು-ಮೂರು ಕಥೆ ಲೈನಪ್‌ನಲ್ಲಿದ್ದು, ಜತೆಗೆ ಎರಡನೇ ಬಾರಿಗೆ ನಿರ್ದೇಶನಕ್ಕೆ ಮುಂದಾಗುತ್ತಿದ್ದಾರೆ.
ಒಂದೇ ರಾತ್ರಿಯಲ್ಲಿ ನಡೆಯುವ ಕಥೆ:
‘ಮನೋರಮಾ’ ಚಿತ್ರದ ಕಥೆಯು ಒಂದೇ ರಾತ್ರಿಯಲ್ಲಿ ನಡೆಯುವುದಾಗಿದೆ. ಕಥೆಗೆ ಚಳಿಗಾಲದ ರಾತ್ರಿಯ ತಂಪಾದ ವಾತಾವರಣ ಬೇಕು. ಹಾಗಾಗಿ ನವೆಂಬರ್, ಡಿಸೆಂಬರ್‌ನಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧರಿಸಿದೆ. ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ರಮೇಶ್ ಭಠ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದ ಪಾತ್ರಗಳ ಆಯ್ಕೆ ಪ್ರಕ್ರಿಯೆ ನಡೆದಿದೆ.