ತಮಿಳುನಾಡು ಚುನಾವಣೆಯಲ್ಲಿ ನಮ್ಮ ಜನರು ದೆಹಲಿ ಜನರ ಹಾದಿಯನ್ನೇ ಹಿಡಿಯಲಿದ್ದಾರೆ: ನಟ ಕಮಲ್​ ಹಾಸನ್​

kamal Hasan vvani
kamal Hasan
Published on

ಚೆನ್ನೈ: ದೆಹಲಿ ವಿಧಾನ ಸಭೆಯಲ್ಲಿ ಭರ್ಜರಿ ಜಯ ದಾಖಲಿಸಿದ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರನ್ನು ತಮಿಳುನಾಟ ಕಮಲ್​ ಹಾಸನ್​ ಅಭಿನಂದಿಸಿದ್ದಾರೆ.

ದೆಹಲಿಯಲ್ಲಿ ಮತ್ತೆ ಗೆದ್ದ ಅರವಿಂದ್​ ಕೇಜ್ರಿವಾಲ್​ ಅವರಿಗೆ ಅಭಿನಂದನೆಗಳು. ದೆಹಲಿಯ ಪ್ರಜ್ಞಾವಂತ ಮತದಾರರು ಪ್ರಗತಿಪರ ರಾಜಕಾರಣವನ್ನು ಸ್ವೀಕರಿಸಿದ್ದಾರೆ. ಆಮ್​ಆದ್ಮಿ ಪಕ್ಷವನ್ನು ಗೆಲ್ಲಿಸುವ ಮೂಲಕ ದಾರಿಯನ್ನು ತೋರಿಸಿದ್ದಾರೆ. ಮುಂದಿನ ವರ್ಷ ತಮಿಳುನಾಡಿನಲ್ಲಿ ನಡೆಯುವ ಚುನಾವಣೆಯಲ್ಲಿ ಜನರು ಇದೇ ದಾರಿಯನ್ನು ಅನುಸರಿಸಲಿದ್ದಾರೆ. ಪ್ರಾಣಿಕತೆ ಮತ್ತು ಬೆಳವಣಿಗೆಯತ್ತ ಸಾಗೋಣ ಎಂದು ಅವರು ಟ್ವೀಟ್​ ಮಾಡಿದ್ದಾರೆ.

ತಮಿಳುನಾಡಿನಲ್ಲಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಮಲ್​ಹಾಸನ್​ ಪರ ಮುಖ್ಯಮಂತ್ರಿ ಕೇಜ್ರಿವಾಲ್​ ಮತಯಾಚಿಸಿದ್ದನ್ನು ಅವರು ಸ್ಮರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net