ಫ್ಯಾನ್ಸ್​ ಮೇಲೆ ತೀವ್ರ ಬೇಸರ; ಶಾಕಿಂಗ್​​ ನಿರ್ಧಾರ ಕೈಗೊಂಡ ನಟ ಜಗಪತಿ ಬಾಬು!

Untitled design - 2023-10-08T140914.442
Published on

ಆಂಧ್ರಪ್ರದೇಶ: ಕನ್ನಡ, ತೆಲುಗು, ತಮಿಳು ಸೇರಿದಂತೆ ಪ್ರಮುಖ ಭಾಷೆಗಳ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ನಟ ಜಗಪತಿ ಬಾಬು ಇದೀಗ ದಿಢೀರ್​ ನಿರ್ಧಾರವೊಂದನ್ನು ಕೈಗೊಳ್ಳುವ ಮುಖೇನ ತಮ್ಮ ಅಭಿಮಾನಿಗಳಿಗೆ ಶಾಕ್​ ನೀಡಿದ್ದಾರೆ.

ನಟ ಜಗಪತಿ ಬಾಬು ಯಾವುದೋ ಒಂದು ಸಂಗತಿಯಿಂದ ತೀವ್ರ ಬೇಸರಗೊಂಡು ತಮ್ಮ ಎಲ್ಲಾ ಅಭಿಮಾನಿ ಸಂಘಗಳು ಮತ್ತು ಟ್ರಸ್ಟ್‌ನೊಂದಿಗಿನ ಸಂಬಂಧವನ್ನು ವಿಸರ್ಜಿಸುವ ಆಘಾತಕಾರಿ ನಿರ್ಧಾರವನ್ನು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿ ತಿಳಿಸಿದ್ದಾರೆ.

ಜಗಪತಿ ಪೋಸ್ಟ್​ ಹೀಗಿದೆ, "ಕಳೆದ 33 ವರ್ಷಗಳಲ್ಲಿ, ನಾನು ನನ್ನ ಅಭಿಮಾನಿಗಳು ಮತ್ತು ಅವರ ಕುಟುಂಬಗಳ ಪರವಾಗಿ ನಿಂತಿದ್ದೇನೆ ಮತ್ತು ಅವರ ಕುಟುಂಬದ ಸದಸ್ಯರಂತೆ ಅವರೊಂದಿಗೆ ಬೆರೆಯುತ್ತಿದ್ದೆ. ಆದರೆ ಅದು ಈಗ ಬದಲಾಗಿದೆ ಎಂದು ತೋರುತ್ತದೆ. ದುರಾಸೆ ಮತ್ತು ನಿರೀಕ್ಷೆಗಳು ಪ್ರೀತಿ ಮತ್ತು ಅಭಿಮಾನವನ್ನು ಬದಲಿಸಿ ಈಗ ನನಗೆ ತೊಂದರೆ ನೀಡಲು ಪ್ರಾರಂಭಿಸಿವೆ" ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

"ಆದಾಗ್ಯೂ, ನನ್ನನ್ನು ಪ್ರಾಮಾಣಿಕವಾಗಿ ಪ್ರೀತಿಸುವ ನನ್ನ ಅಭಿಮಾನಿಗಳ ಪರ ಸದಾ ಇರುತ್ತೇನೆ. ಬದುಕಿ ಬದುಕಲು ಬಿಡಿ” ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.

ಜಗಪತಿ ಅವರ ಈ ಟ್ವೀಟ್ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳು ಮತ್ತು ನೆಟ್ಟಿಗರು ಈ ಬೇಸರಕ್ಕೆ ಮತ್ತು ದಿಢೀರ್​ ನಿರ್ಧಾರಕ್ಕೆ ಬಲವಾದ ಕಾರಣವೇನು ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಆದ್ರೆ, ಈ ಬಗ್ಗೆ ನಟ ಮೌನವನ್ನು ತಾಳಿರುವುದು ಇದೀಗ ಸಾಕಷ್ಟು ಗೊಂದಲಕ್ಕೆ ದಾರಿ ಮಾಡಿಕೊಟ್ಟಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net