

ಮುಂಬೈ: ಕಳೆದ 2 ದಿನಗಳ ಹಿಂದೆ ಗಂಗಾ ನದಿ ಸ್ನಾನಕ್ಕೆಂದು ನದಿಗೆ ಇಳಿದು ನಾಪತ್ತೆಯಾಗಿದ್ದ ಬಾಲಿವುಡ್ ನಟ ಅಜಯ್ ಕುಮಾರ್ ಶಾ ( Ajay Kumar Shah ) ಅವರ ಶವ ( Actor Ends Life ) ಇಂದು ಪತ್ತೆಯಾಗಿದೆ.
ಮೃತ ನಟ ಅಜಯ್ ಕುಮಾರ್ ಶಾ, ಗಂಗಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅಜಯ್ ಕುಮಾರ್ ಶಾ ಕುಟುಂಬ ತಾರಿ ಪ್ರದೇಶದಲ್ಲಿ ವಾಸವಾಗಿದ್ದಾರೆ. ಅಜಯ್ ಕುಮಾರ್ ಅವಿವಾಹಿತರಾಗಿದ್ದು, ಅರುಣ್ ಶಾ ಮತ್ತು ರಾಜಕುಮಾರ್ ಶಾ ಎಂಬ ಇಬ್ಬರು ಸೋದರು ಹಾಗೂ ಓರ್ವ ಬಬಿತಾದೇವಿ ಹೆಸರಿನ ಸೋದರಿಯರಿದ್ದಾರೆ.
ನಡೆದಿದ್ದೇನು?: Actor Ends Life
ಮುಂಬೈನಲ್ಲಿ ( Mumbai ) ನೆಲೆಸಿರುವ ನಟ ಅಜಯ್ ಕುಮಾರ್. ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ಪೂರ್ಣಗೊಳಿಸಲು ಗಂಗಾನದಿ ಸ್ನಾನಕ್ಕೆ ಅಜಯ್ ಕುಮಾರ್ ಹೋಗಿದ್ದರು. ಆರಾದಲ್ಲಿರುವ ಮನೆಗೆ ಬಂದಿದ್ದರು. ಆದರೆ ಎರಡು ದಿನಗಳಿಂದ ಅಜಯ್ ಕುಮಾರ್ ದಿಢೀರ್ ಅಂತ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಗಂಗಾ ನದಿ ತೀರದಲ್ಲಿ ಅಜಯ್ ಕುಮಾರ್ ಚಪ್ಪಲಿ ಸಿಕ್ಕಿತ್ತು. ಅನುಮಾನಗೊಂಡು ನದಿಯಲ್ಲಿ ಹುಡುಕಾಟ ನಡೆಸಿದಾಗ ಅಜಯ್ ಕುಮಾರ್ ಶಾ ಅವರ ಶವ ಪತ್ತೆಯಾಗಿದೆ.
ಅಜಯ್ ಕುಮಾರ್ ಅವರು ಬಾಲಿವುಡ್‌ನ ಹೇರಾಫೇರಿ, ಖಟ್ಟಾ ಮಿಟ್ಟಾ, ಚುಪ್ಕೆ ಚುಪ್ಕೆ ಮತ್ತು ಭಾಗ್ ಭಾಗ್ ಚಿತ್ರಗಳ ಪ್ರಮುಖ ಪಾತ್ರದಲ್ಲಿ ಅಜಯ್ ಕುಮಾರ್ ನಟಿಸಿದ್ದರು. ನಟನೆ ಜೊತೆಗೆ ಮುಂಬೈನಲ್ಲಿ ಅಜಯ್ ಕುಮಾರ್, ನಟನಾ ತರಬೇತಿ ಶಾಲೆಯನ್ನು ನಡೆಸಿದ್ದರು.