ವಿಶ್ವದ ಬೆಸ್ಟ್ ಡೈರೆಕ್ಟರ್ಸ್; 50 ಡೈರೆಕ್ಟರ್ ಪಟ್ಟಿಯಲ್ಲಿದ್ದಾರೆ ರಿಯಲ್ ​ಸ್ಟಾರ್ ಉಪೇಂದ್ರ

Upendra (4)
Published on

ಬೆಂಗಳೂರು:  ವಿಶ್ವದ ದಿ ಬೆಸ್ಟ್ 50 ಡೈರೆಕ್ಟರ್ ಪಟ್ಟಿಯಲ್ಲಿ ಹಾಲಿವುಡ್, ಬಾಲಿವುಡ್‌ನ ದೊಡ್ಡ ನಿರ್ದೇಶಕರ ಮಧ್ಯೆ ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ಉಪೇಂದ್ರ ಅವರ ಹೆಸರೂ ಕೂಡ ಇದೆ.

IMDb ವಿಶ್ವದ ದಿ ಬೆಸ್ಟ್ ಡೈರೆಕ್ಟರ್‌ಗಳ ಒಂದು ಪಟ್ಟಿ ಹೊರಗೆ ಬಿಟ್ಟಿದೆ. ಇದರಲ್ಲಿ ರಿಯಲ್ ಸ್ಟಾರ್ ಉಪೇಂದ್ರ 8 ನೇ ಸ್ಟಾನದಲ್ಲಿಯೇ ಇದ್ದಾರೆ. ಅಳೆದು-ತೂಗಿ ಇಂಟರ್‌ನೆಟ್‌ನಲ್ಲಿರೋ ಡಾಟಾಗಳನ್ನ ಆಧರಿಸಿಯೇ ಈ ಒಂದು ಪಟ್ಟಿ ರೆಡಿ ಆಗಿರುತ್ತದೆ. ಅಂತಹ ಈ IMDb ಯನ್ನ Internet Movie Database ಅಂತಲೂ ಕರೆಯುತ್ತಾರೆ.

ಬಾಲಿವುಡ್‌ ಡೈರೆಕ್ಟರ್ ರಾಜಕುಮಾರ್ ಹಿರಾನಿ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಹಾಲಿವುಡ್‌ ಡೈರೆಕ್ಟರ್ ಕ್ರಿಸ್ಟೋಫರ್ ನೋಲನ್ ಇದ್ದಾರೆ. ಇವರೆಲ್ಲ ಒಂದು ಅತಿ ದೊಡ್ಡ ಪಟ್ಟಿಯಲ್ಲಿ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರ ಹೆಸರು ಇದೆ. ಅದು 8 ನೇ ಸ್ಥಾನದಲ್ಲಿಯೇ ಅನ್ನೋದು ವಿಶೇಷ.

ಉಪೇಂದ್ರ ಅವರು 10 ಸಿನಿಮಾ ಡೈರೆಕ್ಟರ್ ಮಾಡಿದ್ದಾರೆ.  ಸರಿಸುಮಾರು 60 ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅಭಿನಯಿಸಿರೋ ಸಿನಿಮಾಗಳಲ್ಲಿ ತಮ್ಮದ ಒಂದು ಛಾಪು ಮೂಡಿಸಿದ್ದಾರೆ. ಅತ್ಯಂತ ವಿಭಿನ್ನ ಡೈರೆಕ್ಟರ್ ಅನ್ನೋದನ್ನ ಓಂ, ಶ್, ತರ್ಲೆನನ್ಮಗ ಸಿನಿಮಾಗಳ ಹೆಸರು ತೆಗೆದುಕೊಂಡು ಹೇಳಿದ್ದರು. ಈ ಮೂರು ಸಿನಿಮಾ ನೋಡಿದಾಗ, ನಿಮಗೂ ಇದೇ ಫೀಲ್ ಬರುತ್ತದೆ. ನಟ-ನಿರ್ದೇಶಕ ಉಪೇಂದ್ರ ಅಂದ್ರೆ ಸುಮ್ನೆ ಏನೂ ಅಲ್ಲ ಬಿಡಿ. ನಿರ್ದೇಶನದ ಸಿನಿಮಾಗಳು ಇಡೀ ಇಂಡಸ್ಟ್ರಿಯಲ್ಲಿ ಹೊಸ ಅಲೆ ಎಬ್ಬಿಸುತ್ತಲೇ ಇವೆ. ತೆರೆ ಮೇಲೆ ಸಿದ್ಧವಾಗುತ್ತಿರುವ UI ಸಿನಿಮಾ ಅಂತಲೇ ಹೇಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net