

ಬೆಂಗಳೂರು: ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ, ಪ್ರೇರಣಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪ್ರೇರಣಾ ಸೀಮಂತ ಶಾಸ್ತ್ರ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
ಧ್ರುವ ಸರ್ಜಾ ತಮ್ಮ ಫಾರ್ಮ್ ಹೌಸ್‌ನಲ್ಲಿ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಶ್ರೀಕೃಷ್ಣ ಜನ್ಮಾಷ್ಟಮಿ ದಿನ ಅಣ್ಣ ಚಿರಂಜೀವಿ ಸರ್ಜಾ ಸಮಾಧಿ ಇರುವ ಫಾರ್ಮ್ ಹೌಸ್‌ನಲ್ಲಿ ಸೀಮಂತ ಶಾಸ್ತ್ರ ಮಾಡಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
'ಐ ಲವ್ ಯು ಮೈ ವೈಫ್. ಈ ವರ್ಷ ಕೃಷ್ಣ ಜನ್ಮಾಷ್ಟಮಿ ನಮ್ಮ ಕೊಂಚ ಎಕ್ಸಟ್ರಾ ಸ್ಪೆಷಲ್ ಆಗಿತ್ತು. ಆಪ್ತರು ಈ ಕಾರ್ಯಕ್ರದಲ್ಲಿ ಭಾಗಿಯಾಗಿದ್ದರು' ಎಂದು ಧ್ರುವ ಬರೆದುಕೊಂಡಿದ್ದಾರೆ. ಸೀಮಂತ ಕಾರ್ಯಕ್ರಮದ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಹಸಿರು ಮತ್ತು ನೇರಳೆ ಕಾಂಬಿನೇಷನ್ ಸೀರೆಯಲ್ಲಿ ಪ್ರೇರಣಾ ಮಿಂಚಿದ್ದರೆ, ಕ್ರೀಮ್ ಬಣ್ಣದ ಪಂಚೆ ಶೆಲ್ಯೆಯಲ್ಲಿ ಧ್ರುವ ಕಾಣಿಸಿಕೊಂಡಿದ್ದಾರೆ. ಸೆಪ್ಟೆಂಬರ್ 2023ರಲ್ಲ ಪುಟ್ಟ ಕಂದಮ್ಮ ಬರ ಮಾಡಿಕೊಳ್ಳಲಿರುವ ದಂಪತಿ ಕೆಲವು ದಿನಗಳ ಹಿಂದೆ ತಾವು 2 ನೇ ಮಗುವಿನ ಪೋಷಕರಾಗುತ್ತಿರುವ ಕುರಿತಾಗಿ ಸುದ್ದಿ ಹಂಚಿಕೊಂಡಿದ್ದರು.