ಜೀವನಪೂರ್ತಿ ನಿನ್ನ ಜೊತೆ ರೀಲ್ಸ್​ ಮಾಡ್ಕೊಂಡ್​ ಇರ್ತೀನಿ; ಭಾವಿಪತ್ನಿಗೆ ಡಾಲಿ Dhananjay ಕ್ಯೂಟ್ ಪ್ರಪೋಸಲ್​ ವಿಡಿಯೋ ವೈರಲ್

Daali Dhanyatha
Published on

ಬೆಂಗಳೂರು: ನಟ ರಾಕ್ಷಸ, ಸ್ಯಾಂಡಲ್‌ವುಡ್‌ನ ದಿ ಮೋಸ್ಟ್ ಎಲಿಜಿಬಲ್‌ ಬ್ಯಾಚುಲರ್‌ ಎಂದೇ ಖ್ಯಾತಿ ಪಡೆದಿರುವ ಬಹುಭಾಷಾ ನಟ ಡಾಲಿ ಧನಂಜಯ್​ (Dhananjay) ಅವರು ಫೆಬ್ರವರಿ 16ರಂದು ವೈದ್ಯೆ ಧನ್ಯತಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಸದ್ಯ ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿ ಮದುವೆ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ನಟ ಧನಂಜಯ್​ ಅವರು ಚಿತ್ರರಂಗ, ರಾಜಕೀಯ, ಕ್ರೀಡೆ, ಅಭಿಮಾನಿಗಳು ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರನ್ನು ಮದುವೆಗೆ ಆಹ್ವಾನಿಸಿದ್ದಾರೆ. ಈ ಬಗೆಗಿನ ಪೋಸ್ಟ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಫೆಬ್ರವರಿ 16ರಂದು ಧನಂಜಯ್ (Dhananjay) ಹಾಗೂ ಧನ್ಯತಾ (Dhanyatha) ಅವರ ಮದುವೆ ಮೈಸೂರಿನಲ್ಲಿ ನಡೆಯಲಿದ್ದು, ತಮ್ಮೆಲ್ಲಾ ಅಭಿಮಾನಿಗಳಿಗೆ ಧನಂಜಯ ಹಾಗೂ ಧನ್ಯತಾ ವಿಶೇಷವಾಗಿ ಆಹ್ವಾನಿಸಿದ್ದಾರೆ. ಈ ಕುರಿತಾದ ವಿಡಿಯೋ ಒಂದು ಸದ್ಯ ಟ್ರೆಂಡ್​ ಆಗಿದೆ. ಧನಂಜಯ್​ ಅಭಿಮಾನಿಗಳನ್ನು ಮದುವೆಗೆ ಆಹ್ವಾನಿಸಿರುವ ರೀತಿ ಎಲ್ಲರ ಗಮನ ಸೆಳೆಯುತ್ತಿದೆ.

Daali Dhanyatha

ಮದುವೆಯ ಜೊತೆಗೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಿರುವ ಡಾಲಿ ಧನಂಜಯ್ (Dhananjay) ಅವರು ಜಿಂಗೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಧನಂಜಯ್​ ಅವರ  ಕ್ಯಾರೆಕ್ಟರ್‌ ಇಂಟ್ರೋಡಕ್ಷನ್‌ ವಿಡಿಯೋ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದೀಗ  ಜಿಂಗೋ ಸ್ಟೈಲ್​ನಲ್ಲೇ ಬೈ ಬೈ ಬ್ಯಾಚುಲರ್‌ ವಿಡಿಯೋ ಸಿದ್ಧಪಡಿಸಿ ಅಭಿಮಾನಿಗಳಿಗೆ ಮದುವೆ ಆಹ್ವಾನವನ್ನು ನೀಡಿರುವ ಧನಂಜಯ್​ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಸದ್ಯ ಬಿಡುಗಡೆಯಾಗಿರುವ ವಿಡಿಯೋ ನೋಡುವುದಾದರೆ ಧನಂಜಯ್ ಬ್ಯಾಚುಲರ್ ಜೀವನ ಹೇಗಿತ್ತು ಎಂಬುದನ್ನು ವಿವರಿಸಿ, ನಂತರ ಅವರ ಬಾಳಲ್ಲಿ ಧನ್ಯತಾ ಹೇಗೆ ಎಂಟ್ರಿ ಕೊಟ್ಟರು ಎಂಬುದನ್ನ ವಿವರಿಸಲಾಗಿದೆ. ಆ ಬಳಿಕ ಧನಂಜಯ್ ಅವರು ಜೀವನಪೂರ್ತಿ ನಿನ್ನ ಜೊತೆ ರೀಲ್ಸ್​ ಮಾಡ್ಕೊಂಡೆ ಇರ್ತೀನಿ ಎಂದು ಹೇಳಿ ಧನ್ಯತಾ ಅವರಿಗೆ ಉಂಗುರವನ್ನು ತೊಡಿಸುತ್ತಾರೆ. ಈ ವಿಡಿಯೋಗೆ ನಟ ನಾಗಭೂಷಣ್​ ಧ್ವನಿ ನೀಡಿದ್ದು, ಹೊಸ ಜೀವನಕ್ಕೆ ಕಾಲಿಡಲಿರುವ ಕ್ಯೂಟ್​ ಜೋಡಿಯ ವಿಡಿಯೋ ಎಲ್ಲರ ಮನ ಗೆಲ್ಲುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net