ಹಣದ ಹೊಳೆಯಿದ್ದಿದ್ದರಿಂದ ಮದ್ಯದ ಕಡೆಗೆ ಗಮನಹರಿಸಿದರು; ಎಎಪಿ ಸೋಲಿಗೆ Anna Hazare ಕಿಡಿ

Kejriwal Hazare
Published on

ನವದೆಹಲಿ: ಫೆಬ್ರವರು 05ರಂದು ನಡೆದ ದೆಹಲಿ ವಿಧಾನಸಭೆ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಸರ್ಕಾರ ರಚಿಸುವುದು ಪಕ್ಕಾ ಆಗಿದೆ. ಇನ್ನೂ ನಾಲ್ಕನೇ ಅವಧಿಗೆ ಗೆದ್ದ್ಉ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದ್ದ ಆಪ್​ಗೆ ಚುನಾವಣಾ ಫಲಿತಾಂಶ ಭಾರೀ ಮುಖಭಂಗವನ್ನುಂಟು ಮಾಡಿದ್ದು, ಕಾಂಗ್ರೆಸ್ ಮೂರನೇ ಅವಧಿಗೂ ಶೂನ್ಯ ಸಾಧನೆ ಮಾಡಿದೆ.

ಇನ್ನೂ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್ ಸೋಲಿನ ಕುರಿತು ಮಾತನಾಡಿರುವ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ (Anna Hazare) ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Anna Hazare

ಸುದ್ದಿಗಾರರೊಂದಿಗೆ ಈ ಕುರಿತಾಗಿ ಮಾತನಾಡಿದ ಅಣ್ಣಾ ಹಜಾರೆ (Anna Hazare), ಅಭ್ಯರ್ಥಿಯ ನಡತೆ, ಆಲೋಚನೆಗಳು ಪರಿಶುದ್ಧವಾಗಿರಬೇಕು, ಜೀವನ ದೋಷರಹಿತವಾಗಿರಬೇಕು. ತ್ಯಾಗದ ಮನೋಭಾವವಿದ್ದರೆ ಮತದಾರರರು ಅಂತಹವರ ಮೇಲೆ ನಂಬಿಕೆಯಿಡುತ್ತಾರೆ. ಈ ವಿಚಾರವನ್ನು ಕೇಜ್ರಿವಾಲ್ ಬಳಿಯೂ ಹೇಳಿದ್ದೆ. ಆದರೆ ಅವರು ಇದರ ಬಗ್ಗೆ ಗಮನಕೊಡಲಿಲ್ಲ. ಬದಲಾಗಿ ಅವರಲ್ಲಿ ಹಣದ ಹೊಳೆಯಿದ್ದಿದ್ದರಿಂದ ಮದ್ಯದ ಕಡೆಗೆ ಗಮನಹರಿಸಿದರು. ಇದರಿಂದಲೇ ಅವರು ಕಡಿಮೆ ಮತಗಳನ್ನು ಪಡೆಯುತ್ತಿದ್ದಾರೆ.

ರಾಜಕೀಯದಲ್ಲಿ ಆಪಾದನೆಗಳು ಬರುತ್ತದೆ. ಅದು ಸುಳ್ಳು ಎಂದು ನಾವು ಸಾಬೀತು ಮಾಡಬೇಕು ಆದರೆ ಅವರು ಆ ವಿಚಾರದ ಕಡೆಗೆ ತಲೆಹಾಕಲೇ ಇಲ್ಲ. ಸತ್ಯ ಯಾವತ್ತಿದ್ದರು ಸತ್ಯವಾಗಿರುತ್ತದೆ. ಆದ್ದರಿಂದ ನಾನು ಆ ಪಕ್ಷದಿಂದ ದೂರವಿರಬೇಕು ಎಂದು ನಿರ್ಧರಿಸಿದೆ. ಅವತ್ತಿನಿಂದ ಆಪ್‌ನಿಂದ ನಾನು ದೂರ ಇದ್ದೇನೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ (Anna Hazare) ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net