ಬಳ್ಳಾರಿ ಜೈಲಿನಿಂದ ನಟ Darshan ರಿಲೀಸ್​; ಬೆಂಗಳೂರಿಗೆ ಬರುತ್ತಿದ್ದಂತೆ ಮೊದಲು ಮಾಡೋದು ಏನು ಗೊತ್ತಾ?

Darshan
Published on

ಬಳ್ಳಾರಿ: ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ನಾಲ್ಕೂವರೆ ತಿಂಗಳ ಸೆರೆವಾಸದ ಬಳಿಕ ನಟ ದರ್ಶನ್​ಗೆ (Darshan) ಮಧ್ಯಂತರ ಜಾಮೀನು ದೊರೆತ್ತಿದ್ದು, ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಬಳ್ಳಾರಿ ಜೈಲಿನಿಂದ ಬಿಡುಗಡೆಯಾದ ದರ್ಶನ್ (Darshan)​ ಪತ್ನಿಯೊಂದಿಗೆ ಪೊಲೀಸ್​ ಹಾಗೂ ಆಪ್ತರ ಕಾರುಗಳ ಬೆಂಗಾವಲಿನೊಂದಿಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಇತ್ತ ಜೈಲಿನ ಮುಂಭಾಗ ನೆರೆದಿದ್ದ ಅಭಿಮಾನಿಗಳು ದರ್ಶನ್​ (Darshan) ಪರ ಜೈಕಾರ ಕೂಗಿ ನೆಚ್ಚಿನ ನಟನಿಗೆ ಜೈಲಿನಿಂದ ಬೀಳ್ಕೊಟ್ಟರು.

ಬೆನ್ನು ನೋವಿನ ಕಾರಣ ಕುಂಟುತ್ತ ಜೈಲಿನಿಂದ ಹೊರಬಂದ ನಟ ದರ್ಶನ್​ಗೆ (Darshan) ಸಂಬಂಧಿ ಸುಶಾಂತ್​ ನಾಯ್ಡು ದೃಷ್ಟಿ ತೆಗೆದು ಜೈಲಿನ ಮುಂಭಾಗವೇ ತೆಂಗಿನಕಾಯಿ ಹೊಡೆದು ಸ್ವಾಗತಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್​ ಆಗುತ್ತಿದೆ. ಪತ್ನಿ ವಿಜಯಲಕ್ಷ್ಮೀ ಕನಕದುರ್ಗಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬೆನ್ನು ನೋವಿನ ಹಿನ್ನೆಲೆಯಲ್ಲಿ ದರ್ಶನ್ (Darshan) ಅವರು ಜಾಮೀನಿಗಾಗಿ ಹೈಕೋರ್ಟ್‌ (HighCourt) ಮೆಟ್ಟಿಲೇರಿದ್ದರು. ದರ್ಶನ್ (Darshan) ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು 6 ವಾರಗಳ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಹೈಕೋರ್ಟ್ ಜಾಮೀನು ಕರುಣಿಸಿದ ಹಿನ್ನೆಲೆಯಲ್ಲಿ ದರ್ಶನ್ ಕುಟುಂಬಸ್ಥರು ಕಾನೂನು ಪ್ರಕ್ರಿಯೆಗಳನ್ನ ಮುಗಿಸಿದ್ದಾರೆ. ಹೈಕೋರ್ಟ್‌ ಜಾಮೀನು ಮಂಜೂರು ಪ್ರತಿಯನ್ನ CCH 57 ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. CCH 57 ಕೋರ್ಟ್‌ ದರ್ಶನ್​ (Darshan) ರಿಲೀಸ್‌ಗೆ ಆರ್ಡರ್ ಮಾಡಿದೆ. ಬಿಡುಗಡೆಯ ಆರ್ಡರ್ ಕಾಪಿಯನ್ನು ಬಳ್ಳಾರಿ ಜೈಲಿಗೆ ಕಳುಹಿಸಲಾಗಿದೆ.

ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ದರ್ಶನ್ (Darshan) ಅವರು ಬಳ್ಳಾರಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ದರ್ಶನ್ ಅವರು ಜೈಲಿನಿಂದ ಬಿಡುಗಡೆ ಆದ್ರೆ ಅವರ ಸ್ನೇಹಿತರು ಹೆಲಿಕಾಪ್ಟರ್‌ ವ್ಯವಸ್ಥೆಯನ್ನು ಮಾಡುತ್ತಾರೆ ಅನ್ನೋ ಮಾತು ಕೇಳಿ ಬಂದಿತ್ತು. ಆದರೆ ಮೆಡಿಕಲ್ ರಿಪೋರ್ಟ್‌ ಮೇಲೆ ದರ್ಶನ್ (Darshan) ಜಾಮೀನು ಪಡೆದಿದ್ದಾರೆ. ಹೀಗಾಗಿ ದರ್ಶನ್ (Darshan) ಅವರನ್ನು ಸೂಕ್ತ ಭದ್ರತೆಯೊಂದಿಗೆ ಕಾರಿನಲ್ಲಿ ಬೆಂಗಳೂರಿಗೆ ಕರೆದುಕೊಂಡು ಬರಲಾಗುತ್ತಿದೆ. ಬಳ್ಳಾರಿಯಿಂದ ಚಳಗುರ್ಕಿವರಿಗೂ ಪೊಲೀಸ್ ಭದ್ರತಾ ವ್ಯವಸ್ಥೆ ನೀಡಲಾಗುತ್ತದೆ. ಬಳಿಕ ಆಂಧ್ರದ ಅನಂತಪುರ ಮಾರ್ಗವಾಗಿ ದರ್ಶನ್‌ ಅವರು ಬೆಂಗಳೂರಿಗೆ ತೆರಳಲಿದ್ದಾರೆ. ಬಳ್ಳಾರಿ, ಹಗರಿ, ಚೆಳ್ಳಗುರ್ಕಿ, ಅನಂತಪುರ ಮಾರ್ಗವಾಗಿ ಬೆಂಗಳೂರಿಗೆ ದರ್ಶನ್ ಅವರನ್ನು ಕರೆತರಲಾಗುತ್ತಿದೆ.

ಇನ್ನೂ ನಟ ದರ್ಶನ್​ಗೆ (Darshan) ಬೆಂಗಳೂರಿನಲ್ಲಿ ಅವರ ಅಯ್ಕೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸ್ವತಂತ್ರವಿದೆ. ಬಿಡುಗಡೆಯಾದ ತಕ್ಷಣ ಆಸ್ಪತ್ರೆಗೆ ರಿಪೋರ್ಟ್ ಆಗಬೇಕಿದೆ. ವೈದ್ಯಕೀಯ ಪರೀಕ್ಷೆ ವರದಿಯನ್ನ ಪಡೆಯಬೇಕು, ಶಸ್ತ್ರಚಿಕಿತ್ಸೆಯ ಸಂಭವನೀಯ ದಿನಾಂಕ ನಮೂದಿಸಿದ ಆಸ್ಪತ್ರೆಯ ವರದಿ, ಅರ್ಜಿದಾರರ ಅಸ್ಪತ್ರೆ ದಾಖಲಾತಿ ಅವಧಿ, ಅನುಸರಣಾ ವರದಿಯನ್ನ ಒಂದು ವಾರದೊಳಗೆ ಕೋರ್ಟ್​ಗೆ ಸಲ್ಲಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net