ಫ್ಯಾನ್ಸ್ ಕೊಟ್ಟ ದಿನಸಿ ಸಾಮಾಗ್ರಿ ಪೌರಕಾರ್ಮಿಕರಿಗೆ ವಿತರಿಸಿದ ಡಿ ಬಾಸ್‌

darshan 3
Published on

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ದರ್ಶನ್‌ ಅವರು ಫೆ ೧೬ ರಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಡಿ ಬಾಸ್‌ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಕೊಟ್ಟ ದಿನಸಿ ಸಾಮಾಗ್ರಿ ಪೌರಕಾರ್ಮಿಕರಿಗೆ ವಿತರಣೆ ಮಾಡಲಾಗಿದೆ.

ತಮ್ಮ ಹುಟ್ಟುಹಬ್ಬಕ್ಕೆ ಕೇಕ್, ಹಾರ, ತುರಾಯಿ ತರದೇ ದಿನಸಿ ಸಾಮಾಗ್ರಿಗಳನ್ನು ನೀಡುವಂತೆ ದರ್ಶನ್ ಅಭಿಮಾನಿಗಳಿಗೆ ಕರೆಕೊಟ್ಟಿದ್ದರು. ಅದರಂತೆ ಅಭಿಮಾನಿಗಳು ಸಾಕಷ್ಟು ಪ್ರಮಾಣದಲ್ಲಿ ದಿನಸಿ ನೀಡಿದ್ದರು. ಆ ದಿನಸಿಗಳನ್ನು ಇಂದು ಪೌರಕಾರ್ಮಿಕರಿಗೆ ವಿತರಣೆ ಮಾಡಲಾಗಿದೆ.

ಅಕ್ಕಿ, ಬೆಳೆ ಸೇರಿದಂತೆ ಅಭಿಮಾನಿಗಳು ಕೊಟ್ಟ ದಿನಸಿಗಳನ್ನು ಕೆಲ ವರ್ಷಗಳ ಕಾಲ ಸಿದ್ಧಗಂಗಾ ಮಠಕ್ಕೆ ನೀಡಿದ್ದರು. ಜೊತೆಗೆ ಅನಾಥಾಶ್ರಮಗಳಿಗೂ ಕಳುಹಿಸಿಕೊಟ್ಟಿದ್ದರು. ಈ ಬಾರಿ ಪೌರಕಾರ್ಮಿಕರ ಹಂಚಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net