ಹೊಸ ವರ್ಷಕ್ಕೆ ಕಾಲಿಡ್ತಿದ್ದಂತೆ 'ಡೆವಿಲ್'​ ಡಬ್ಬಿಂಗ್ ಶುರು​; ನಟ ದರ್ಶನ್​ಗೆ ಸಿಹಿ-ಕಹಿ | Actor Darshan

ವಿಜಯವಾಣಿ (19)
Published on

Actor Darshan: ಚಿತ್ರದುರ್ಗದ ರೇಣುಕಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಇತ್ತೀಚೆಗಷ್ಟೇ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 7 ಮಂದಿ ಜಾಮೀನಿನ ಮೇರೆಗೆ ಹೊರಬಂದಿದ್ದು, ಸದ್ಯ ರಿಲೀಫ್​ನಲ್ಲಿ ಇದ್ದಾರೆ. ಜೈಲಿನಿಂದ ಮುಕ್ತಿ ಪಡೆದ ನಟ ದರ್ಶನ್​ ತಮ್ಮ ವೃತ್ತಿಗೆ ಈಗ ಮರಳಿದ್ದು, ಬಾಕಿ ಉಳಿದಿರುವ ಬಹುನಿರೀಕ್ಷಿತ ಸಿನಿಮಾಗಳ ಕೆಲಸದಲ್ಲಿ ಸದ್ಯ ಸಖತ್ ಬಿಜಿಯಾಗಿದ್ದಾರೆ.

ಸಿಹಿ

2024ರ ಡಿಸೆಂಬರ್​ನಲ್ಲಿಯೇ ತೆರೆ ಕಾಣಬೇಕಿದ್ದ ದರ್ಶನ್ ಅಭಿನಯದ ಡೆವಿಲ್​ ಸಿನಿಮಾ ನಟನ ಬಂಧನದ ಹಿನ್ನಲೆ ರಿಲೀಸ್​ ದಿನಾಂಕದಿಂದ ದೂರ ಸರಿಯಿತು. ಆದರೆ, ಮತ್ತೆ ಚಿತ್ರದ ಕೆಲಸಗಳಿಗೆ ಮರಳಿರುವ ದರ್ಶನ್​, ಹೊಸ ವರ್ಷಕ್ಕೆ ಹೊಸ ಕಳೆ ಎಂಬಂತೆ 'ಡೆವಿಲ್' ಸಿನಿಮಾದ ಡಬ್ಬಿಂಗ್​ ಕೆಲಸವನ್ನು ಶುರು ಮಾಡುವ ಮೂಲಕ ಎಂದಿನಂತೆ ತಮ್ಮ ಸಿನಿ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಿದ್ದಾರೆ. ಪ್ರಸ್ತುತ ಚಿತ್ರದ ಅರ್ಧದಷ್ಟು ಚಿತ್ರೀಕರಣ ಮುಗಿಸಿದ್ದಾರೆ ಎಂದು ವರದಿಯಾಗಿದೆ.

ಕಹಿ

ಒಂದೆಡೆ 'ಡೆವಿಲ್'​ ಕೆಲಸಗಳು ಮರು ಆರಂಭವಾಗಿರುವುದು ಸಿಹಿಯಾದರೆ, ಖಾಕಿ ಪಡೆ ದರ್ಶನ್​ಗೆ ನೀಡಲಾದ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಮುಂದಾಗಿರುವುದು ಕಹಿಯಾಗಿದೆ. ಈ ಹಿಂದೆ ಖಾಕಿ ಪಡೆಗೆ ಗೃಹ ಇಲಾಖೆಯಿಂದ ಅನುಮತಿ ಪತ್ರ ಸಿಕ್ಕಿರಲಿಲ್ಲ. ಹೀಗಾಗಿ ಕೆಲವು ದಿನಗಳಿಂದ ಪತ್ರಕ್ಕಾಗಿ ಕಾಯುತ್ತಿದ್ದ ಪೊಲೀಸರಿಗೆ ಇದೀಗ ಗೃಹ ಇಲಾಖೆಯಿಂದ ಅನುಮತಿ ಕಡತ ಹಸ್ತಾಂತರವಾಗಿದೆ. ಕೈಗೆ ಪತ್ರ ಬರುತ್ತಿದ್ದಂತೆ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ಸದ್ಯ ಖಾಕಿ ಪಡೆ ಸಜ್ಜಾಗಿದೆ. ಇದು 'ದಾಸ'ನಿಗೆ ತಪ್ಪದ ಸಂಕಷ್ಟ ಎನ್ನುವಂತೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net