ರೇಣುಕಸ್ವಾಮಿ ಹತ್ಯೆ ಪ್ರಕರಣ: 5 ದಿನಗಳ ಕಾಲ ನಟ ದರ್ಶನ್ ಹಾಗೂ ಗ್ಯಾಂಗ್​ ಮತ್ತೆ ಪೊಲೀಸ್​ ಕಸ್ಟಡಿಗೆ!

Untitled-design-2024-06-15T175757.542
Published on

ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್​ ಸೇರಿದಂತೆ 13 ಆರೋಪಿಗಳನ್ನು ಇದೀಗ ಮತ್ತೆ ಐದು ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಕಳಿಸಲಾಗಿದ್ದು, ಜೂನ್ 20ರವರೆಗೂ ಕಸ್ಟಡಿಯಲು ಇರಿಸುವಂತೆ ಆದೇಶಿಸಲಾಗಿದೆ.

ಕಳೆದ ಕೆಲವು ದಿನಗಳಿಂದಲೂ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಿರಂತರ ವಿಚಾರಣೆಯಲ್ಲಿ ತೊಡಗಿರುವ ದರ್ಶನ್​ ಮತ್ತು ಗ್ಯಾಂಗ್​ ಅನ್ನು ಪೊಲೀಸರು ಇಂದು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ಕೋರ್ಟ್​ ಮುಂದಿನ ಐದು ದಿನಗಳವರೆಗೂ ದರ್ಶನ್ ಸೇರಿದಂತೆ 13 ಆರೋಪಿಗಳನ್ನು ಪೊಲೀಸ್​ ಕಸ್ಟಡಿಯಲ್ಲಿರಿಸುವಂತೆ ಆದೇಶ ಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net