10 ಕೋಟಿ ರೂ. ಜಾಹೀರಾತಿನ ಆಫರ್ ತಿರಸ್ಕರಿಸಿದ ಸ್ಟೈಲಿಶ್ ಸ್ಟಾರ್! ಕಾರಣ ಹೀಗಿದೆ…

ವಿಜಯವಾಣಿ (94) (1)
Published on

ಆಂಧ್ರಪ್ರದೇಶ: 2024ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿರುವ ಟಾಲಿವುಡ್​ನ ಸ್ಟೈಲಿಶ್ ಸ್ಟಾರ್, ನಟ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2: ದಿ ರೂಲ್' ಸದ್ಯ ಸಿನಿಪ್ರೇಕ್ಷಕರಲ್ಲಿ ಬಿಡುಗಡೆಗೂ ಮುನ್ನವೇ ಭಾರೀ ಕುತೂಹಲ ಕೆರಳಿಸಿದೆ. ಈ ಮಧ್ಯೆ ಚಿತ್ರದಲ್ಲಿ ತಮ್ಮ ಜಾಹಿರಾತನ್ನು ಹಾಕುವಂತೆ ಸಂಸ್ಥೆಯೊಂದು ನೀಡಿದ 10 ಕೋಟಿ ರೂ. ಆಫರ್​ ಅನ್ನು ಇದೀಗ ಅಲ್ಲು ಅರ್ಜುನ್​ ತಿರಸ್ಕರಿಸಿದ್ದಾರೆ.

ಸದ್ಯ ಅಲ್ಲು ಅರ್ಜುನ್​ ತಮ್ಮ ಮುಂದಿನ 'ಪುಷ್ಪ 2' ಸಿನಿಮಾದ ಚಿತ್ರೀಕರಣದಲ್ಲಿ ಸಂಪೂರ್ಣವಾಗಿ ಬ್ಯುಸಿಯಾಗಿದ್ದು, ಇದೀಗ ತಮ್ಮ ಚಿತ್ರದಲ್ಲಿ ಆ್ಯಡ್​ ಪ್ರಸಾರ ಮಾಡಲು ಖಾಸಗಿ ಬ್ರಾಂಡ್​ ನೀಡಿದ ಬೃಹತ್​ ಮೊತ್ತದ ಆಫರ್​ ಅನ್ನು ಸುತಾರಾಂ ತಿರಸ್ಕರಿಸಿದ್ದಾರೆ. ಮದ್ಯ ಮತ್ತು ಪಾನ್ ಮಸಾಲಾ ಬ್ರಾಂಡ್‌ನಿಂದ 10 ಕೋಟಿ ರೂ.ಗಳ ಕೊಡುಗೆಯನ್ನು ರಿಜೆಕ್ಟ್​ ಮಾಡಿದ ನಟ, ಸಿನಿಮಾದಲ್ಲಿ ಇಂತಹ ಜಾಹಿರಾತು ಅಗತ್ಯವಿಲ್ಲ ಎಂದು ದೃಢವಾಗಿ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಮ್ಮ ಉತ್ಪನ್ನಗಳ ಬ್ರಾಂಡ್ ಲೋಗೋವನ್ನು​ ಪುಷ್ಪಾ ಅವರ ಪಾತ್ರದಲ್ಲಿ ಕಂಡಬರುವ ಧೂಮಪಾನ ಸೀನ್​ಗಳಲ್ಲಿ ಪ್ರಮುಖವಾಗಿ ಪ್ರದರ್ಶಿಸಬೇಕು ಎಂದು ಕಂಪೆನಿ ತಿಳಿಸಿತು. ಆದ್ರೆ, ಇಂತಹ ಉತ್ಪನ್ನಗಳ ಪ್ರಚಾರದ ವಿರುದ್ಧ ಅಲ್ಲು ಅರ್ಜುನ್ ದೃಢ ನಿಲುವು ತೆಗೆದುಕೊಂಡಿದ್ದು, ಈ ಆಫರ್​ ಅನ್ನು ಐಕಾನ್​ ಸ್ಟಾರ್​ ನಯವಾಗಿಯೇ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

ಅಲ್ಲು ಅರ್ಜುನ್​ ತೆಗೆದುಕೊಂಡ ಈ ನಿಲುವಿಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net