ಪತ್ರಿಕಾಗೋಷ್ಟಿಯಲ್ಲಿ ತಂಬಾಕು ಸೇವನೆಯ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ನಟ ಅಕ್ಷಯ್​ ಕುಮಾರ್​|Bollywood

untitled-design-2025-09-11t132518586-68c28070640b3
Published on

Bollywood: ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂಬರುವ ಚಲನಚಿತ್ರವಾದ ಜಾಲಿ ಎಲ್​ಎಲ್​ಬಿ 3 ಪ್ರಚಾರದಲ್ಲಿ ಸಧ್ಯ ಬ್ಯುಸಿಯಾಗಿದ್ದಾರೆ. ಈ ನಡುವೆ ಇತ್ತೀಚೆಗೆ ಕಾನ್ಪುರದಲ್ಲಿ ನಡೆದಂತಹ ಚಿತ್ರದ ಟ್ರೇಲರ್​ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂವಾದ ನಡೆಸುವ ಸಮಯದಲ್ಲಿ ಗುಟ್ಕಾ ಸೇವನೆ ಒಳ್ಳೆಯದಲ್ಲ ಎಂಬ ಹೇಳಿಕೆಯನ್ನು ನೀಡಿದರು.

ಗುಟ್ಕಾ ವಿರೋಧಿ ಸಂದೇಶ ನೀಡಿದ ಅಕ್ಷಯ್​

ಸುದ್ದಿಗೋಷ್ಠಿ ನಡೆಯುವ ಸಂದರ್ಭದಲ್ಲಿ ವರದಿಗಾರನೊಬ್ಬ ಅಕ್ಷಯ್​ ಅವರಿಗೆ ಚಲನಚಿತ್ರದಲ್ಲಿರುವ ಅವರ ಪಾತ್ರದ ಅನುಭವ ಹಾಗೂ ತಂಬಾಕು ಸೇವನೆಯ ಸಂಬಂಧದ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಅಕ್ಷಯ್​ ನಗಾಡುತ್ತ (ಟ್ಕಾ ನಹಿ ಖಾನಾ ಚಾಹಿಯೇ) ತಂಬಾಕು ಸೇವಿಸಬಾರದು ಎಂದು ಉತ್ತರಿಸಿದರು.

ಇನ್ನು ಈ ವೇಲೆ ವರದಿಗಾರರು ಮತ್ತೆ ಪ್ರಶ್ನೆ ಕೇಳಲು ಪ್ರಯತ್ನಿಸಿದ್ದು, ಇದಕ್ಕೆ ಚಾಣಾಕ್ಷತನದಿಂದ ಉತ್ತರ ನೀಡಿದ ಅಕ್ಷಯ್​ ಸಂದರ್ಶನ ನಿಮ್ಮದೋ? ನಮ್ಮದೋ? ತಂಬಾಕು ಸೇವಿಸಬಾರದು ಎಂದು ಹೇಳಿದ್ದೇನೆ ಅಷ್ಟೇ ಎಂದು ಉತ್ತರಿಸಿ, ತಮ್ಮ ಸಿನಿಮಾದ ಬಗ್ಗೆ ಮಾತನಾಡಲು ಪ್ರಾರಂಭಿಸಿದರು.

ಈ ಮೊದಲು ಶಾರುಖ್​ ಖಾನ್​ ಮತ್ತು ಅಜಯ್​ ದೇವಗನ್​ ಜೊತೆಗೆ ಅಕ್ಷಯ್​ ಅವರು ಗುಟ್ಕಾ ಕಂಪನಿಗಳಿಗೆ ಜಾಹಿರಾತು ಪ್ರಚಾರ ನೀಡುತ್ತಿದ್ದರು. ಈ ಜಾಹಿರಾತುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ನೋಟಿಸ್​ ನೀಡಿತು. ಇದರಿಂದ ತೀವ್ರ ಟೀಕೆಗಳನ್ನು ಅನುಭವಿಸಿದ ನಂತರ, ಅಕ್ಷಯ್ ಪ್ಯಾನ್ ಮಸಾಲಾ ಬ್ರಾಂಡ್‌ನ ಬ್ರಾಂಡ್ ರಾಯಭಾರಿ ಸ್ಥಾನದಿಂದ ಕೆಳಗಿಳಿದರು.

ಜಾಲಿ ಎಲ್ಎಲ್​ಬಿ- 3 ಚಿತ್ರದ ಬಗ್ಗೆ

ಈ ಚಿತ್ರದಲ್ಲಿ ಅಕ್ಷಯ್​ ಜಾಲಿ ಮಿಶ್ರಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಹಿರಿಯ ನಟ ಸೌರಭ್ ಶುಕ್ಲಾ ನ್ಯಾಯಾಧೀಶ ತ್ರಿಪಾಠಿ ಪಾತ್ರದಲ್ಲಿ, ಹುಮಾ ಖುರೇಷಿ, ಅಮೃತಾ ರಾವ್ ಮತ್ತು ಗಜರಾಜ್ ರಾವ್ ಕೂಡ ನಟಿಸಿದ್ದಾರೆ.

ಇನ್ನು ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಅಕ್ಷಯ್​ ನನಗೆ ಈ ಸಿನಿಮಾ ವಿಶೇಷ ಪ್ರಯಾಣವಾಗಿತ್ತು. ಈ ಚಿತ್ರ ರೋಮಾಂಚನಕಾರಿಯಾಗಿದೆ. ಪಾತ್ರವನ್ನು ಪುನರುಜ್ಜೀವನಗೊಳಿಸುವುದಲ್ಲ. ಬದಲಾಗಿ ಅರ್ಷದ್ ಅದ್ಭುತವಾಗಿ ನಿರ್ವಹಿಸಿದ ನ್ಯಾಯಾಲಯದಲ್ಲಿ ಜಾಲಿಯನ್ನು ನಿಲ್ಲಸುವ ಬಗ್ಗೆ ಈ ಸಿನಿಮಾ ಸುತ್ತುತ್ತಿದೆ. ಹಾಗೂ ಹಾಸ್ಯ, ಸಂಘರ್ಷ ಇರುವಂತಹ ದೃಶ್ಯವನ್ನು ತೋರಿಸುತ್ತಿದೆ ಎಂದು ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net