ಮಗನ Loveyapa ಸಿನಿಮಾ ಗೆದ್ದರೆ ಸಿಗರೇಟ್​ ಬಿಡುವೆ: ನಟ ಅಮಿರ್​ ಖಾನ್​ ಭರವಸೆ

dk-57-677e554d3e739
Published on

ಮುಂಬೈ: ತಮ್ಮ ಹಿರಿಯ ಮಗನ ಜುನೈದ್ ಅವರ ಎರಡನೇ​ ಸಿನಿಮಾ ಲವ್ಯಾಪ(Loveyapa) ಚಿತ್ರ ಬಾಕ್ಸ್​ಆಫಿಸ್​ನಲ್ಲಿ ಧೂಳ್​ ಎಬ್ಬಿಸಿದರೆ ನಾನು ಸಿಗರೇಟ್​(ಧೂಮಪಾನ) ಬಿಡುತ್ತೇನೆ ಎಂದು ಬಾಲಿವುಡ್​ ನಟ ಅಮಿರ್​ಖಾನ್​ ಭರವಸೆ ನೀಡಿದ್ದಾರೆ.

ಇತ್ತೀಚಿನ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ ಅಮಿರ್​ ಖಾನ್​, ‘’ ತಮ್ಮ ಮಗನ ಸಿನಿಮಾ ಹಿಟ್​ ಆಗಲಿದೆ. ಅಲ್ಲದೆ, ನಾನು ಖಂಡಿತ ಧೂಮಪಾನ ಬಿಡುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ’’

‘ನಗೆ ಈ ಚಿತ್ರ ತುಂಬಾ ಇಷ್ಟವಾಯಿತು. ಇದು ಎಲ್ಲರಿಗೂ ಹಿಡಿಸುವ ಮನರಂಜನೆ ಸಿನಿಮಾವಾಗಿದೆ. ಈ ಚಿತ್ರದಲ್ಲಿ ಮೊಬೈಲ್​ ಪೋನ್​ಗಳಿಂದಾಗಿ ಮನುಷ್ಯರ ದೈನಂದಿನ ಜೀವನ ಹೇಗೆ ಬದಲಾಗಿದೆ. ಮತ್ತು ತಂತ್ರಜ್ನಾನದಿಂದ ಹೇಗೆ ಜೀವನ ಸಾಗುತ್ತದೆ ಎಂಬ ಆಸಕ್ತಿದಾಯಕ ವಿಷಯಗಳನ್ನು ತೋರಿಸಲಾಗಿದೆ. ಈ ಚಿತ್ರದಲ್ಲಿ ಪ್ರತಿಯೊಬ್ಬರು ತುಂಬಾ ಚೆನ್ನಾಗಿ ಪಾತ್ರ ನಿರ್ವಹಿಸಿದ್ದಾರೆ. ಅಲ್ಲದೆ. ನಟಿ ಶ್ರೀದೇವಿಯ ದೊಡ್ಡ ಫ್ಯಾನ್​ ನಾನು. ಅವರ ಕುಟುಂಬಸ್ಥರು ಕೂಡ ಚಿತ್ರದಲ್ಲಿ ಇದ್ದು ಅದ್ಭುತ ನಟನೆ ಮಾಡಿದ್ದಾರೆ’ ಎಂದು ಅಮಿರ್​ಖಾನ್​ ಹೇಳಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ Loveyapa ಚಿತ್ರ ರೋಮ್ಯಾಂಟಿಕ್​ ಆಧಾರಿತ ಚಿತ್ರವಾಗಿದ್ದು, ಜುನೈದ್​ ಮತ್ತು ಖುಷಿ ಕಪೂರ್​ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಲಾಲ್​ ಸಿಂಗ್​ ಚಡ್ಡಾ ಖ್ಯಾತಿಯ ಅದ್ವೈತ್ ಚಂದನ್​ ಚಿತ್ರವನ್ನು ನಿರ್ದೇಶಿಸಿದ್ದಾರೆ.

ವರದಿಗಳ ಪ್ರಕಾರ, ಇದೇ ಜನವರಿ 10ರಂದು ಅಮಿರ್​ಖಾನ್​ ಈ ಸಿನಿಮಾದ ಟ್ರೈಲರ್​ ಬಿಡಿಗಡೆ ಮಾಡಲಿದ್ದಾರೆ. ಫೆ.7ರಂದು ಸಿನಿಮಾ ಬಿಡುಗಡೆಗೊಳ್ಳಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net