

ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಾಗೇ ಮತ್ತೊಂದೆಡೆ ಕರೊನಾನೂ ಅದರ ಪಾಡಿಗದು ಹೆಚ್ಚುತ್ತಲೇ ಇದೆ.
ಕಳೆದ 24 ಗಂಟೆಯಲ್ಲಿ 7,571 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿವೆ. 6,561 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹಾಗೇ ಇಂದು 93 ಸೋಂಕಿತರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 2,64,546ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಸಂಖ್ಯೆ 4,522ಮಂದಿ ಹಾಗೂ ಡಿಸ್ಚಾರ್ಜ್ ಆದವರು ಒಟ್ಟು 1,76, 942. ಸಕ್ರಿಯ ಪ್ರಕರಣಗಳು 83,066 ಎಂದು ಆರೋಗ್ಯ ಇಲಾಖೆ ತಿಳಿಸಿದೆ.