ಪ್ರವಾಸೋದ್ಯಮ ಕ್ಷೇತ್ರದ ಪುನಶ್ಚೇತನಕ್ಕೆ ಕ್ರಮ: ಸಚಿವ ಸಿ.ಟಿ.ರವಿ ಭರವಸೆ

C.T.Ravi mangalore
Published on

ಬೆಂಗಳೂರು: ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಪುನಶ್ಚೇತನ ಹಾಗೂ ಉದ್ದಿಮೆದಾರರ ಕೋರಿಕೆ ಕುರಿತು ಸಿಎಂ ಹಾಗೂ ಕೇಂದ್ರ ಪ್ರವಾಸೋದ್ಯಮ ಸಚಿವರೊಂದಿಗೆ ಮಾತನಾಡುವುದಾಗಿ ಸಚಿವ  ಸಿ.ಟಿ. ರವಿ ಭರವಸೆ ನೀಡಿದ್ದಾರೆ.

ಸೋಮವಾರ ವಿಡಿಯೋ ಸಂವಾದ ನಡೆಸಿದ ಸಚಿವರು, ಪ್ರವಾಸೋದ್ಯಮ ವಲಯದ ಉದ್ದಿಮೆದಾರರ ಸಂಕಷ್ಟ ಆಲಿಸಿದರು. ಸರ್ಕಾರ ಎಂದಿಗೂ ನಿಮ್ಮ ಜತೆಗಿರುತ್ತದೆ ಎಂಬ ಅಭಯ ನೀಡಿದರು. ಅಲ್ಲದೆ, ಬೇಡಿಕೆ ಹಾಗೂ ಸಲಹೆಗಳಿಗೆ ಸ್ಪಂದಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂಬ ತಿಳಿಸಿದರು. ವಿಶ್ವ ಪ್ರವಾಸೋದ್ಯಮ ವಲಯಕ್ಕೆ ಕರೊನಾಘಾತವಾಗಿದೆ. ಲಾಕ್​ಡೌನ್ ಮುಗಿದ ಬಳಿಕ ಪ್ರವಾಸೋದ್ಯಮದ ಪುನರುತ್ಥಾನ ಹಾಗೂ ಉದ್ದಿಮೆದಾರರ ಸಮಸ್ಯೆ ಆಲಿಸಲು ಈ ವಿಡಿಯೋ ಸಂವಾದ ನಡೆಸುತ್ತಿರುವುದಾಗಿ ಸಚಿವರು ತಿಳಿಸಿದರು. ರಾಜ್ಯದ ಹಲವು ಪ್ರವಾಸಿ ಸ್ಥಳಗಳಲ್ಲಿ ಸಿಲುಕಿದ್ದರು, 26 ದೇಶಗಳ 3,200 ಪ್ರವಾಸಿಗಳು ಸುರಕ್ಷಿತವಾಗಿ ತಮ್ಮ ದೇಶಗಳಿಗೆ ಮರಳಿದ್ದಾರೆ ಎಂದು ತಿಳಿಸಿದರು.

ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಕೆ.ಎನ್.ರಮೇಶ್, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಮತ್ತಿತರರಿದ್ದರು.

ಸೋಂಕು ನಿಯಂತ್ರಿಸಲು ಹಾಗೂ ಸಮುದಾಯಕ್ಕೆ ಹರಡುವುದನ್ನು ತಡೆಗಟ್ಟಲು ಸರ್ಕಾರ ಕೈಗೊಂಡ ಕ್ರಮಗಳಿಗೆ ಸಾರ್ವಜನಿಕರು, ಉದ್ದಿಮೆದಾರರು ಬೆಂಬಲಿಸಿದ್ದಾರೆ. ಕಟ್ಟುನಿಟ್ಟಿನ ಕ್ರಮಗಳ ಕಾರಣಕ್ಕೆ ಈ ಸೋಂಕು ಸ್ವಲ್ಪಮಟ್ಟಿಗೆ ನಿಯಂತ್ರಣದಲ್ಲಿದೆ. | ಸಿ.ಟಿ. ರವಿ ಪ್ರವಾಸೋದ್ಯಮ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net