ಪಾರ್ಕ್​ನಲ್ಲಿ ಕಿರಿಕ್​ ನಟಿಯ 'ತುಂಡುಡುಗೆ' ಕಸರತ್ತು; ಉದ್ಯಾನದಲ್ಲೇ ಲಾಕ್​ ಮಾಡಿದ ಸಾರ್ವಜನಿಕರು

Samyukta hegde
Published on

ಬೆಂಗಳೂರು: ಸಾರ್ವಜನಿಕ ಉದ್ಯಾನದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪದಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಖ್ಯಾತಿಯ ನಟಿ ಸಂಯುಕ್ತ ಹೆಗ್ಡೆಯನ್ನು ಜನರೇ ಪಾರ್ಕ್​ನಲ್ಲಿ ಲಾಕ್​ ಮಾಡಿದ್ದಾರೆ. ಅವರ ವರ್ತನೆಗೆ ಭಾರಿ ಆಕ್ಷೇಪವೂ ವ್ಯಕ್ತವಾಗಿ, ವಾಗ್ವಾದಕ್ಕೂ ಕಾರಣವಾಗಿದೆ.

ರಾಜಧಾನಿಯ ಅಗರ ಉದ್ಯನವನದಲ್ಲಿ ಸಂಯುಕ್ತ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪಾರ್ಕ್​ಗೆ ವಾಯುವಿಹಾರಕ್ಕೆಂದು ಬಂದಿದ್ದ ಜನರೇ ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತುಂಡುಡುಗೆಯಲ್ಲಿದ್ದ ಕಿರಿಕ್​ ಹುಡುಗಿ: ಸಂಯುಕ್ತ ಹೆಗ್ಡೆ ಮತ್ತಾಕೆಯ ಸಂಗಡಿಗರು ಪಾರ್ಕ್​ನಲ್ಲಿ ತುಂಡುಡುಗೆ ತೊಟ್ಟು ಹುಲಾ ಲೂಪ್​ ಡಾನ್ಸ್​ ಮಾಡಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.  ನಟಿಯ ಈ ವರ್ತನೆಯನ್ನು ಪ್ರಶ್ನಿಸಿದಾಗ ಭಾರಿ ವಾಗ್ವಾದ ನಡೆದಿದೆ. ಜನರು ನಟಿ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಪಾರ್ಕ್​ನ ಗೇಟ್​ ಬಂದ್​ ಮಾಡಿ ಪೊಲೀಸರಿಗೆ ಕರೆ ಮಾಡಿದ್ದಾರೆ.

ಇದು ಮತ್ತೊಂದು ಸುತ್ತಿನ ವಾಗ್ವಾದಕ್ಕೆ ಕಾರಣವಾಗಿದೆ. ಗೇಟ್​ ತೆರೆಯುವಂತೆ ಜನರೊಂದಿಗೆ ನಟಿ ಜಗಳವಾಡಿದ್ದಾರೆ. ಅಲ್ಲಿಗೆ ಬಂದ ಪೊಲೀಸರು ನಟಿಯನ್ನು ಕರೆದುಕೊಂಡು ಹೋಗಿದ್ದಾರೆ.

ಈ ವಿದ್ಯಮಾನವನ್ನೆಲ್ಲ ಸ್ವತಃ ಸಂಯುಕ್ತಾ ಇನ್​ಸ್ಟಾಗ್ರಾಂ ಲೈವ್​ ಬಂದು ಚಿತ್ರೀಕರಿಸಿದ್ದಾರೆ. ಸ್ಪೋರ್ಟ್ಸ್​ ಬ್ರಾ ಧರಿಸಿ ವ್ಯಾಯಾಮ ಮಾಡಿದರೆ ಏನು ತಪ್ಪು ಎಂದು ಪ್ರಶ್ನಿಸಿದ್ದಾರೆ. ಇದಕ್ಕಾಗಿ ಜನರೆಲ್ಲ ನನ್ನ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net