ಪೊಲೀಸ್​ ಅಧಿಕಾರಿ ಪುತ್ರ ನಾಪತ್ತೆ! ವಿಚಾರಣೆಯಲ್ಲಿ ಬಯಲಾಯ್ತು ಘೋರ ಸತ್ಯ

ವಿಜಯವಾಣಿ - 2024-01-27T085150.553
Published on

ಹೊಸದಿಲ್ಲಿ: ಭಿವಾನಿಯಲ್ಲಿ ನಡೆದ ಮದುವೆಯೊಂದಕ್ಕೆ ಹೋಗಿದ್ದ ದೆಹಲಿಯ ಪೊಲೀಸ್​ ಅಧಿಕಾರಿಯ ಪುತ್ರನನ್ನು ಇಬ್ಬರು ದುಷ್ಕರ್ಮಿಗಳು ಹತ್ಯೆಗೈದು ಕಾಲುವೆಗೆ ಬಿಸಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಗಳಲ್ಲಿ ಒಬ್ಬನನ್ನು ವಿಚಾರಣೆಗೆ ಒಳಪಡಿಸಿದಾಗ ಅಸಲಿ ಸಂಗತಿ ಬಟಾಬಯಲಾಗಿದೆ. ಸದ್ಯ ಈ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.

ಭಿವಾನಿಯಲ್ಲಿ ನಡೆದ ಮದುವೆಯೊಂದಕ್ಕೆ ಹೋಗಿದ್ದ ದೆಹಲಿಯ ಪೊಲೀಸ್​ ಅಧಿಕಾರಿಯ ಪುತ್ರ ಸಮಾರಂಭ ಮುಗಿದರು ಮನೆಗೆ ಹಿಂತಿರುಗದೆ ಇದದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೂಡಲೇ ಶಂಕಿಸಿದ ಎಸಿಪಿ, ಮಗ ನಾಪತ್ತೆಯಾದ ಕುರಿತು ದೂರನ್ನು ದಾಖಲಿಸಿ, ತನಿಖೆಗೆ ತಿಳಿಸಿದ್ದರು. ಈ ವೇಳೆ ನರೇಲಾ ನಿವಾಸಿ 19 ವರ್ಷದ ಅಭಿಷೇಕ್ ಎಂಬಾತನನ್ನು ಅನುಮಾನಿಸಿದ ಪೊಲೀಸರು, ಆತನನ್ನು ವಿಚಾರಣೆಗೊಳಪಡಿಸಿದ ಬೆನ್ನಲ್ಲೇ ಇಡೀ ಘಟನೆ ಬಯಲಾಗಿದೆ.

ಅವರನ್ನು ಹತ್ಯೆಗೈದು ಹರಿಯಾಣದಲ್ಲಿ ಕಾಲುವೆಗೆ ಎಸೆದಿದ್ದೇವೆ ಎಂದ ಆರೋಪಿ ಅಭಿಷೇಕ್‌ನನ್ನು ಸದ್ಯ ಬಂಧಿಸಲಾಗಿದೆ. ವಿಚಾರಣೆ ನಡೆಸಿದಾಗ ಜನವರಿ 22ರಂದು ಮಧ್ಯಾಹ್ನ ವಕೀಲರ ಗುಮಾಸ್ತ ವಿಕಾಸ್ ಅವರನ್ನು ಸಂಪರ್ಕಿಸಿ ಭಿವಾನಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ತನ್ನೊಂದಿಗೆ ಬರುವಂತೆ ಹೇಳಿದ್ದ ಎಂಬುದು ತಿಳಿದುಬಂದಿದೆ ಎಂದು ಉಪ ಆಯುಕ್ತರು ಹೇಳಿದ್ದಾರೆ.

ಹತ್ಯೆಗೆ ಕಾರಣವೇನು? ಎಸಿಪಿ ಪುತ್ರ ತನ್ನಿಂದ ಸಾಲ ಪಡೆದಿದ್ದ ಎಂದು ಹೇಳಿದ ಆರೋಪಿ, ಲಕ್ಷಯ್ ಸಾಲ ಪಡೆದಿದ್ದನು ಮತ್ತು ಹಣ ವಾಪಾಸ್ ಕೊಡು ಎಂದು ಹೇಳಿದರೆ, ಅನುಚಿತವಾಗಿ ವರ್ತಿಸಿದನು ಎಂದು ವಿಕಾಸ್ ಅಭಿಷೇಕ್‌ಗೆ ದೂರಿದ್ದಾನೆ. ಇವರಿಬ್ಬರು ಸೇರಿ ಲಕ್ಷಯ್​ಗೆ ಬುದ್ದಿ ಕಲಿಸಬೇಕು ಎಂದು ನಿರ್ಧರಿಸಿ, ಮದುವೆಗೆ ಬರಲು ಆಹ್ವಾನಿಸಿದ್ದಾರೆ. ತದನಂತರ ಕಾರಿನಲ್ಲಿ ಕರೆದೊಯ್ದು, ಹತ್ಯೆಗೈದು ಕಾಲುವೆಗೆ ಎಸೆಯಲು ನಿರ್ಧರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ತರುವಾಯ ಎಫ್‌ಐಆರ್‌ನಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 201 (ಸಾಕ್ಷ್ಯ ಕಣ್ಮರೆಯಾಗಲು ಕಾರಣ) ಸೇರಿಸಿದ್ದಾರೆ, ಇದುವರೆಗೆ ಸಂಗ್ರಹಿಸಿದ ಪುರಾವೆಗಳ ಆಧಾರದ ಮೇಲೆ ಸಂತ್ರಸ್ತನ ದೇಹ ಮತ್ತು ಎರಡನೇ ಶಂಕಿತ ವಿಕಾಸ್​ ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net