ಅಂಗಡಿಯಲ್ಲಿ ಹಣ ಎಣಿಸುತ್ತಿದ್ದ ವ್ಯಾಪಾರಸ್ಥ: ದಿಢೀರ್ ಕೈಚಳಕ ತೋರಿಸಿದ ಕಳ್ಳ!

ಅಂಗಡಿಯಲ್ಲಿ ಹಣ ಎಣಿಸುತ್ತಿದ್ದ ವ್ಯಾಪಾರಸ್ಥ: ದಿಢೀರ್ ಕೈಚಳಕ ತೋರಿಸಿದ ಕಳ್ಳ! #Shopkeeper#businessman#moneythief - youtube
Published on

ಸೇಡಂ: ಸ್ಥಳೀಯ ವ್ಯಾಪಾರಸ್ಥರೊಬ್ಬರು ದಿನದ ವ್ಯಾಪಾರ ಮುಗಿಸಿ, ತಮ್ಮ ಅಂಗಡಿಯ ಟೇಬಲ್ ಮೇಲೆ ಆ ದಿನದ ವ್ಯಾಪಾರದ ಹಣವನ್ನು ಎಣಿಸಿಕೊಳ್ಳುತ್ತಿದ್ದಾಗ ದಿಡೀರನೆ ಕಳ್ಳನೊಬ್ಬ ತನ್ನ ಕೈಚಳಕ ತೋರಿಸಿದ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದ ಅಂಗಡಿಯೊಂದರಲ್ಲಿ ಅದರ ಮಾಲೀಕರು ವ್ಯಾಪಾರ ಮುಗಿಸಿ ಹಣ ಎಣಿಸಿಕೊಳ್ಳುತ್ತಿದ್ದರು. ಅದೇ ವೇಳೆ ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಸ್ವಲ್ಪ ಹೊತ್ತು ಅದೂ ಇದೂ ವಿಚಾರಿಸಿದಂತೆ ಮಾಡಿ, ಪಟಕ್ಕನೇ ನೋಟಿನ ಕಂತೆಯೊಂದನ್ನು ಎಗರಿಸಿಕೊಂಡು ಹೋಗಿದ್ದಾನೆ. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ಸೇಡಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳನಿಗಾಗಿ ಹುಡುಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net