ಬಾಟಲಿ ಕ್ಯಾಪ್​​ನಲ್ಲಿ 20 ಲಕ್ಷ ರೂ ಮೌಲ್ಯದ ಚಿನ್ನ ಸಾಗಾಟ! ಆರೋಪಿ ಬಂಧನ

Bbau (72)
Published on

ನವದೆಹಲಿ: ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಬಂದ ಪ್ರಯಾಣಿಕನೊಬ್ಬ 20 ಲಕ್ಷ ರೂ ಮೌಲ್ಯದ ಚಿನ್ನವನ್ನು ದೇಶಕ್ಕೆ ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದಾಗ ದೆಹಲಿ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ.

ಈ ಘಟನೆ ಅ.25(ಶನಿವಾರ) ರಂದು ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ನಡೆದಿತ್ತು. ಅನುಮಾನಸ್ಪದ ರೀತಿಯಲ್ಲಿ ವರ್ತಿಸಿದ ಈತನನ್ನು ತಪಾಸಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಬಾಟಲಿ ಮುಚ್ಚಳದಲ್ಲಿ ಅಡಗಿಸಿಟ್ಟ ಚಿನ್ನ

ಎಕ್ಸ್-ರೇ ತಪಾಸಣೆಯ ಸಮಯದಲ್ಲಿ, ಅಧಿಕಾರಿಗಳು ಪ್ರಯಾಣಿಕರ ಸಾಮಾನುಗಳಲ್ಲಿ ಅನುಮಾನಾಸ್ಪದ ಚಿತ್ರಗಳನ್ನು ಗಮನಿಸಿದರು. ವಿವರವಾದ ಪರೀಕ್ಷೆಯಲ್ಲಿ ಆ ವ್ಯಕ್ತಿ ಪ್ಲಾಸ್ಟಿಕ್ ನೀರಿನ ಬಾಟಲಿಯ ಮುಚ್ಚಳದ ಅಡಿಯಲ್ಲಿ ಚಿನ್ನದ ತುಂಡನ್ನು ಬಚ್ಚಿಟ್ಟಿರುವುದು ಕಂಡುಬಂದಿದೆ. "170 ಗ್ರಾಂ ತೂಕದ ಚಿನ್ನವನ್ನು (ಚಿನ್ನದ ಅಂದಾಜು ಮಾರುಕಟ್ಟೆ ಮೌಲ್ಯ ಸುಮಾರು 20 ಲಕ್ಷ ರೂ.)ವಶಪಡಿಸಿಕೊಂಡಿದ್ದು, 1962 ರ ಕಸ್ಟಮ್ಸ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​ )

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net