ಅಪಘಾತದಿಂದ ಶಿಗ್ಗಾಂವಿಯ ಯೋಧ ಸಾವು

IMG-20221002-WA0004
Published on

ಹಾವೇರಿ: ವಾಹನ ಅಪಘಾತದಲ್ಲಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶೀಲವಂತ ಸೋಮಾಪುರ ಗ್ರಾಮದ ಯೋಧ ಶಿವರಾಜ ಗಂಗಮ್ಮನವರ (23) ಮೃತಪಟ್ಟಿದ್ದಾರೆ.
ಇವರು 2016ರಲ್ಲಿ ಭಾರತೀಯ ಸೇನೆಗೆ ಸೇರಿದ್ದರು. ಪಂಜಾಬ್‌ನ ಬಟಿಂಡಾ ನಗರದಲ್ಲಿ ಯೋಧ ಶಿವರಾಜ ತೆರಳುತ್ತಿದ್ದ ವಾಹನ ಕೆಟ್ಟು ನಿಂತಿತ್ತು. ಆಗ ಹಿಂದಿನಿಂದ ಬೇರೊಂದು ವಾಹನ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಳೆದ ತಿಂಗಳು ರಜೆ ತೆಗೆದುಕೊಂಡು ಸ್ವಗ್ರಾಮಕ್ಕೆ ಬಂದು ಮರಳಿ ಕರ್ತವ್ಯಕ್ಕೆ ತೆರಳಿದ್ದರು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ. ಮೃತ ಯೋಧನಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net