ಟ್ರಕ್‌-ಆಟೋ ಮಧ್ಯೆ ಭೀಕರ ಅಪಘಾತ; ಐವರು ಸ್ಥಳದಲ್ಲೇ ಮೃತ್ಯು!

Untitled design (6)
Published on

ಉತ್ತರಪ್ರದೇಶ: ಆಟೋ ರಿಕ್ಷಾಗೆ ಕಂಟೈನರ್ ಡಿಕ್ಕಿ ಹೊಡೆದ ಪರಿಣಾಮ 13 ವರ್ಷದ ಬಾಲಕ ಸೇರಿದಂತೆ ಐವರು ಅಪಘಾತದಲ್ಲಿ ಮೃತಪಟ್ಟ ಘಟನೆ ಉತ್ತರಪ್ರದೇಶದ ಗುರುದ್ವಾರದಲ್ಲಿ ವರದಿಯಾಗಿದೆ.

ಗುರುದ್ವಾರದ ಗುರು ಕಾ ತಾಲ್ ಬಳಿ ಹಿಂಬದಿಯಿಂದ ಬಂದ ಕಂಟೈನರ್ ಆಟೋ ರಿಕ್ಷಾಗೆ ರಭಸದಿಂದ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದು, ಕಂಟೈನರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

"ಎನ್‌ಎಚ್ 19 ರಲ್ಲಿ ಕಂಟೈನರ್ ಆಟೋ ನಡುವೆ ಭೀಕರ ಅಪಘಾತ ಸಂಭವಿಸಿದೆ. ಸಾವನಪ್ಪಿದ ಐವರಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಮತ್ತು 13 ವರ್ಷದ ಬಾಲಕ" ಎಂದು ಹೇಳಿದ ಪೊಲೀಸ್ ಉಪ ಆಯುಕ್ತರು, "ಲಾರಿಯ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಆತನ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಕಾನೂನು ಕ್ರಮ ಜರುಗಿಸಲಾಗುತ್ತದೆ" ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net