ಏಳು ಕಿಲೋಗಿಂತ ಹೆಚ್ಚು ಚಿನ್ನಾಭರಣ! ಎಸಿಬಿ ಅಧಿಕಾರಿಗಳ ದಾಳಿ ಸಮಯದಲ್ಲಿ ಪತ್ತೆ; ಇಲ್ಲಿದೆ ಅದರ ವಿಡಿಯೋ

1193748
Published on

ಬೆಂಗಳೂರು: ರಾಜ್ಯದ ವಿವಿಧ ಕಡೆಗಳಲ್ಲಿ ಇಂದು ಏಕಕಾಲಕ್ಕೆ ಹಲವಾರು ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ನಡೆದಿದೆ. ಈ ಸಂದರ್ಭದಲ್ಲಿ ಸಿಕ್ಕ ಚಿನ್ನಾಭರಣ, ಬೆಳ್ಳಿಯ ಸಾಮಾನುಗಳು ಗಮನ ಸೆಳೆಯುತ್ತಿವೆ.

ಅದರಲ್ಲೂ ಒಬ್ಬ ಅಧಿಕಾರಿಯ ಮನೆಯಲ್ಲಂತೂ ಏಳು ಕಿಲೋಗಿಂತ ಹೆಚ್ಚು ಚಿನ್ನಾಭರಣಗಳು ಸಿಕ್ಕಿರುವುದು ಅಚ್ಚರಿಯುಂಟು ಮಾಡಿದೆ. ದಾಳಿಯ ಸಂದರ್ಭದಲ್ಲಿ ತೆಗೆದ ಈ ಆಭರಣಗಳ ವಿಡಿಯೋ ಮತ್ತು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಅತಿ ಆಕರ್ಷಕವಾದ ವಿನ್ಯಾಸವುಳ್ಳ ನೂರಾರು ಚಿನ್ನದ ಸರಗಳು, ಉಂಗುರಗಳು ಈ ವಿಡಿಯೊದಲ್ಲಿ ಗಮನ ಸೆಳೆಯುತ್ತವೆ. ಅದಕ್ಕಿಂತ ಹೆಚ್ಚಾಗಿ ಈ ಭ್ರಷ್ಟ ಅಧಿಕಾರಿ ಸಂಗ್ರಹಿಸಿದ್ದ ಚಿನ್ನದ ಬಿಸ್ಕತ್‌ಗಳು, ಚಿನ್ನದ ನಾಣ್ಯಗಳು ವಿಡಿಯೋದಲ್ಲಿ ಮಿಂಚುತ್ತಿವೆ. ಇದರ ಜೊತೆಗೆ ಆತನ ಬಳಿಯಿದ್ದ ಕೋಟ್ಯಂತರ ರೂಪಾಯಿ ನಗದು ಹಣವನ್ನೂ ಒಂದೆಡೆ ಇಟ್ಟು ಅಧಿಕಾರಿಗಳು ವಿಡಿಯೋ ಮಾಡಿದ್ದಾರೆ. ಅದೇ ವಿಡಿಯೋ ಇದೀಗ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net