

ರಾಣೆಬೆನ್ನೂರ: ಸ್ವಾತಂತ್ರ$್ಯ ದಿನಾಚರಣೆ ನಿಮಿತ್ತ ಅಖಿಲ ಭಾರತೀಯ ವಿದ್ಯಾಥಿರ್ ಪರಿಷತ್ (ಎಬಿವಿಪಿ) ತಾಲೂಕು ಟಕದ ವತಿಯಿಂದ ಬುಧವಾರ ನಗರದಲ್ಲಿ ತಿರಂಗಾ ಯಾತ್ರೆ ನಡೆಸಲಾಯಿತು.
ನಗರದ ಖಾಸಗಿ ಕಾಲೇಜ್ ಆವರಣದಲ್ಲಿ ಗೋ ಗ್ರೀನ್ ಅಧ್ಯಕ್ಷ ಡಾ. ಗಿರೀಶ ಕೆಂಚಪ್ಪನವರ ತಿರಂಗಾ ಯಾತ್ರೆಗೆ ಚಾಲನೆ ನೀಡಿದರು. ಇಲ್ಲಿಂದ ಆರಂಭಗೊಂಡ ಯಾತ್ರೆ ಹಳೇ ಪಿ.ಬಿ. ರಸ್ತೆ, ಬಸ್ ನಿಲ್ದಾಣ ವೃತ್ತ, ಪೋಸ್ಟ್ ವೃತ್ತ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೆಎಲ್ಇ ಸಂಸ್ಥೆಯ ರಾಜ ರಾಜೇಶ್ವರಿ ಕಾಲೇಜ್ ಆವರಣಕ್ಕೆ ಬಂದು ಕೊನೆಗೊಂಡಿತು.
ಡಾ. ರತ್ನಪ್ರಭಾ ಕೆಂಚ್ಚಪ್ಪನವರ, ಪ್ರಾಚಾರ್ಯ ಬಸವರಾಜ ಕಮ್ಮಾರ, ಸಂಟನೆಯ ರಾಜ್ಯ ಕಾರ್ಯಕಾರಿಣಿ ಸದಸ್ಯ ಅಭಿಲಾಷ ಬದಾಮಿ, ಜಿಲ್ಲಾ ಸಂಘಟನಾ ಕಾರ್ಯದಶಿರ್ ಹನುಮಂತ ಹಳ್ಳೂರ, ನಗರ ಕಾರ್ಯದಶಿರ್ ಪವನಕುಮಾರ ಇಟಗಿ, ನಗರ ಸಹ ಕಾರ್ಯದಶಿರ್ ಎಲ್ಲಮ್ಮ, ದರ್ಶಶ, ಸುಶ್ಮಿತಾ, ನವೀನ, ಬಸವರಾಜ ಮತ್ತಿತರರು ಪಾಲ್ಗೊಂಡಿದ್ದರು.