

ನವದೆಹಲಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ದೆಹಲಿ ವಿಶ್ವವಿದ್ಯಾಲಯದ ಹಲವು ಸ್ಥಳಗಳಲ್ಲಿ ಛಾತ್ರ ಸಂವಾದವನ್ನು ಆಯೋಜಿಸಿತ್ತು. ಮುಂಬರುವ DUSU ಚುನಾವಣೆಯಲ್ಲಿ ಸ್ಪರ್ಧಿಸುವ ಎಬಿವಿಪಿಯ ಸಂಭಾವ್ಯ ಅಭ್ಯರ್ಥಿಗಳು ಸಂವಾದದಲ್ಲಿ ಭಾಗವಹಿಸಿದ್ದ 4000ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಛಾತ್ರ ಸಂವಾದದಲ್ಲಿ ಎಬಿವಿಪಿಯ ಸಂಭಾವ್ಯ ಅಭ್ಯರ್ಥಿಗಳು ತಮ್ಮ ಯೋಜನೆಗಳನ್ನು ಪ್ರಸ್ತುತಪಡಿಸಿದರು. ದೆಹಲಿ ವಿಶ್ವವಿದ್ಯಾಲಯಲ್ಲಿನ ವಿದ್ಯಾರ್ಥಿಗಳ ಕಲ್ಯಾಣ ಕಾರ್ಯಗಳು ಹಾಗೂ ಸಮಗ್ರ ಅಭಿವೃದ್ಧಿಯು ಮೊದಲ ಆದ್ಯತೆಯಾದೆ. ಸರಣಿ ಚರ್ಚೆಗಳ ಮೂಲಕ ಯೋಜನೆಯಲ್ಲಿನ ವಿಚಾರಗಳನ್ನು ಅಭಿವೃದ್ಧಿ ಪಡಿಸಿದ್ದು, ಸೇವೆ ಸಲ್ಲಿಸವು ಅವಕಾಶ ನೀಡುವಂತೆ ಮನವಿ ಮಾಡಿದರು. ಇದಷ್ಟೆ ಅಲ್ಲದೆ ಎಬಿವಿಪಿ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ ದೆಹಲಿ ವಿಶ್ವವಿದ್ಯಾಲಯದ 5000ಕ್ಕೂ ಹೆಚ್ಚು ಮಹಿಳಾ ವಿದ್ಯಾರ್ಥಿಗಳನ್ನು ಗೌರವಿಸಲು ಹಾಗು ಅಭಿನಂದಿಸಲು ಸೆಪ್ಟೆಂಬರ್ 10 ಮತ್ತು 12ರಂದು ಆಯೋಜಿಸಿದ್ದ ಸ್ವಯಂಸಿದ್ಧ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.
ಇನ್ನೂ ಈ ಬಗ್ಗೆ ಮಾತನಾಡಿದ ಎಬಿವಿಪಿ ರಾಜ್ಯ ಕಾರ್ಯದರ್ಶಿ ಶ್ರೀ ಹರ್ಷಅತ್ರಿ, ಎಬಿವಿಪಿ ನೇತೃತ್ವದ ಡಿಯುಎಸ್‌ಯು ಅತ್ಯಂತ ಪ್ರಾಮಾಣಿಕ ಮತ್ತು ಸಮರ್ಪಣಾ ಮನೋಭಾವದಿಂದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ 365 ದಿನಗಳು ಕೆಲಸ ಮಾಡಿದೆ. ಈ ವರ್ಷವೂ ಪೂರ್ವ ಪ್ರಚಾರದ ಸಮಯದಲ್ಲಿ ಪ್ರತಿಯೊಂದು ಕಾಲೇಜಿಗೆ ಭೇಟಿ ನೀಡುತ್ತಿದ್ದೇವೆ. ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳನ್ನು ಚರ್ಚಿಸುವ ಉದ್ದೇಶದಿಂದ ಚತ್ರಸಂವಾದವನ್ನು ಆಯೋಜಿಸಿದ್ದೇವೆ ಎಂದು ಹೇಳಿದರು.