

ಬೆಂಗಳೂರು: ( Abhishek Aviva Son Named As Rana Amar Ambareesh ) ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಅವರ ಮಗನ ನಾಮಕರಣ ಇಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಅದ್ಧೂರಿಯಾಗಿ ನೆರವೇರಿದೆ.ಸಮಲತಾ ಅವರ ಮೊಮ್ಮಗನ ಹೆಸರು ರಿವೀಲ್ ಆಗಿದೆ.
ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಅವರ ಮಗನಿಗೆ ರಾಣಾ ಅಮರ್ ಅಂಬರೀಶ್ ಎಂದು ಹೆಸರಿಡಲಾಗಿದೆ. ಅಮರ್ ಎಂಬುದು ಅಂಬರೀಶ್ ಅವರ ಹೆಸರು. ಅಂಬರೀಶ್ ಅವರ ಮೂಲ ಹೆಸರು ಅಮರ್ನಾಥ್. ರಾಣಾ ಎಂದರೆ ರಾಜ, ಮಹಾಯೋಧ ಎಂದೆಲ್ಲ ಅರ್ಥವಿದೆ. ವಿಶೇಷವಾಗಿ ರಜಪೂತರು ತಮ್ಮ ರಾಜರನ್ನು ರಾಣಾ ಎಂದೇ ಕರೆಯುತ್ತಿದ್ದರು. ಅರೆಬಿಕ್ ಭಾಷೆಯಲ್ಲಿ ರಾಣಾ ಎಂದರೆ ಸುಂದರ ಎಂಬ ಅರ್ಥವೂ ಇದೆ.
ನಾಮಕರಣ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಭಾಗಿ ಆಗಿದ್ದಾರೆ. ಮಂಡ್ಯ ಸೇರಿದಂತೆ ಬೆಂಗಳೂರಿನ ಕೆಲವು ರಾಜಕಾರಣಿಗಳು ಸಹ ನಾಮಕರಣ ಮಹೋತ್ಸವದಲ್ಲಿ ಭಾಗಿಯಾಗಿದ್ದಾರೆ.