

ಮುಂಬೈ: ಬಾಲಿವುಡ್ ಹಿರಿಯ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ಪುತ್ರ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ದಂಪತಿಗಳ ವಿಚ್ಛೇದನ ಬಗ್ಗೆ ವದಂತಿ(Divorce Rumors) ಹರಡುವವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.
ಹೌದು, ಇತ್ತೀಚಿಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ದಂಪತಿಗಳ ವಿಚ್ಛೇದನ ಕುರಿತು ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತೀವೆ. ದಸ್ವಿ ಸಿನಿಮಾ ಚಿತ್ರೀಕರಣ ಸಮಯದಲ್ಲಿ ಅಭಿಷೇಕ್ ಅವರು ನಟಿ ನಿಮ್ರತ್ ಕೌರ್ ಜತೆ ಇದ್ದಾರೆ ಎಂದು ಊಹಪೋಹಗಳು ಹರಿದಾಡಿತ್ತು. ಅಲ್ಲದೇ, ಕಳೆದ ಒಂದು ವರ್ಷದಿಂದ ಇವರಿಬ್ಬರ ಬಗ್ಗೆ ಡೈವರ್ಸ್ ವದಂತಿಗಳು ಕಾಣಿಸಿಕೊಂಡಿದ್ದು, ಇಬ್ಬರು ಪ್ರತ್ಯೇಕ ವಾಸವಾಗಿದ್ದಾರೆ ಎಂದು ವರದಿಗಳು ಉಲ್ಲೇಖಿಸಿದ್ದವು. ಹೀಗಾಗಿ, ಈ ಬಗ್ಗೆ ಸ್ವತ ಬಿಗ್ ಬಿ ಮಾತನಾಡಿದ್ದು, ವದಂತಿ ಹರಡುವವರನ್ನು ಬಲವಾಗಿ ಟೀಕಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಅಮಿತಾಬ್ ಬಚ್ಚನ್, '' ಈ ಜಗತ್ತಿನಲ್ಲಿ ಮೂರ್ಖರ ಮತ್ತು ಮಂದ ಬುದ್ಧಿಯ ಜನರ ಕೊರತೆ ಇಲ್ಲ. ಅವರು ಇತರರ ಬಗ್ಗೆ ಬರೆಯುವ ಮೂಲಕ ತಮ್ಮ ದುಷ್ಕೃತ್ಯವನ್ನು ಮರೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರು ತಮ್ಮ ವೈಯಕ್ತಿಕ, ಬುದ್ಧಿಹೀನ ಮತ್ತು ಅರೆ ಬುದ್ಧಿಯ ಕೊರತೆಗಳನ್ನು ಮರೆ ಮಾಚಲು ತಮ್ಮದೇ ಆದ ಅಸಮರ್ಥ ಬರವಣಿಗೆ ಬರೆದು ಮುದ್ರಿಸುತ್ತಿದ್ದಾರೆ'' ಎಂದು ಬರೆದುಕೊಂಡಿದ್ದಾರೆ.
ಇದನ್ನು ಅಮಿತಾಬ್, ತಮ್ಮ ಮಗನ ಬಗ್ಗೆ ವಿಚ್ಛೇದನ ಹರಡುವವರ ಬಗ್ಗೆ ಮಾರ್ಮಿಕವಾಗಿ ಬರೆದಿದ್ದಾರೆ ಎಂದು ಹಲವರು ವ್ಯಾಖ್ಯಾನಿಸಿದ್ದಾರೆ,(ಏಜೆನ್ಸೀಸ್).