ಹೇರ್‌ಸ್ಟೈಲ್ ಬದಲಿಸಿದ ಐಶ್ವರ್ಯಾ ರೈ ಮಗಳು; ಆರಾಧ್ಯ ಹೊಸ ಲುಕ್‌ಗಾಗಿ ಅಂಬಾನಿ 1000 ಕೋಟಿ ಖರ್ಚು ಮಾಡಬೇಕಾಯ್ತು ಎಂದ ನೆಟ್ಟಿಗರು

aaradhya
Published on

ಮುಂಬೈ: ಬಾಲಿವುಡ್‌ನ ಸ್ಟಾರ್‌ ಕಪಲ್‌ ಆಗಿರುವ  ಐಶ್ವರ್ಯಾ ರೈ-ಅಭಿಷೇಕ್  ಬಚ್ಚನ್ ಪುತ್ರಿ  ಆರಾಧ್ಯ ಬಚ್ಚನ್ ಅವರು ಸ್ಟಾರ್‌ ಕಿಡ್‌. ಅನಂತ್- ರಾಧಿಕಾ ವಿವಾಹಪೂರ್ವ ಸಮಾರಂಭಕ್ಕೆ ಐಶ್ವರ್ಯಾ ರೈ ಪುತ್ರಿ ಹೊಸ ಹೇರ್‌ಸ್ಟೈಲ್‌ನಲ್ಲಿ ಬಂದು ಎಲ್ಲರ ಗಮನ ಸೆಳೆದಿದ್ದಾಳೆ. ಈ ಕುರಿತಾದ ಕೆಲವು ಫೋಟೋಗಳು ಸೋಶಿಯಲ್‌  ಮೀಡಿಯಾದಲ್ಲಿ ವೈರಲ್‌ ಆಗಿದೆ.

ಸದಾ ಹಣೆಯ ಮೇಲೆ ಕೂದಲು ಇಳಿಸಿದ ರೀತಿ, ಬೇಬಿ ಡಾಲ್‌ ಹೇರ್‌ಸ್ಟೈಲ್- ಆರಾಧ್ಯ ಬಚ್ಚನ್ ಕಾಣಿಸಿಕೊಳ್ಳುತ್ತಿದ್ದರು. ಹಣೆ ದೊಡ್ಡದಿರಬಹುದೇ? ಹೀಗಾಗಿ ಚಿಕ್ಕಂದಿನಿಂದಲೂ ಈ ಹೇರ್‌ಸ್ಟೈಲ್‌ ಮಾಡಿಕೊಂಡೆ ಬಂದಿದ್ದಾರೆ ಎನ್ನಲಾಗಿತ್ತು.  ಆದರೆ ಈಗ ಹೊಸ ಹೇರ್‌ಸೈಲ್‌ ನೋಡಿ  ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

Aaradhya Bachchan

12 ವರ್ಷದ ಆರಾಧ್ಯ ಬೇಬಿ ಪಿಂಕ್ ಬಣ್ಣದ ಗೌನ್ ಧರಿಸಿ, ಕೂದಲನ್ನು ಇಳಿ ಬಿಟ್ಟು ತಾಯಿಯೊಂದಿಗೆ  ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಆರಾಧ್ಯ ಕಾರ್ಯಕ್ರಮದಲ್ಲಿ ಡ್ರಮ್ ಬೀಟ್ಸ್‌ಗೆ ತಂದೆ ಅಭಿಷೇಕ್ ಬಚ್ಚನ್ ಹಾಗೂ ತಾಯಿ ಐಶ್ವರ್ಯಾ ನಡುವೆ ಕುಳಿತು ಚಪ್ಪಾಳೆ ತಟ್ಟುತ್ತಾ ಎಂಜಾಯ್ ಮಾಡುತ್ತಿದ್ದುದು ಕೂಡಾ ಎಲ್ಲರ ಗಮನ ಸೆಳೆದಿದೆ.

ಆರಾಧ್ಯ ಬಚ್ಚನ್ ಹೇರ್‌ಸ್ಟೈಲ್ ಬದಲಾಯಿಸೋಕೆ ಅಂಬಾನಿ 1000 ಕೋಟಿ ಖರ್ಚು ಮಾಡಬೇಕಾಯ್ತು ಎಂದು ತಮಾಷೆಯ ಚಟಾಕಿಯನ್ನೂ ಹಾರಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net