'ಅರವಿಂದ್ ಕೇಜ್ರಿವಾಲ್‌ರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿ'; ಮುಂಬೈ ಸಭೆಗೂ ಮುನ್ನ ಆಪ್‌ ಬೇಡಿಕೆ

aravind (1)
Published on

ನವದೆಹಲಿ: ವಿರೋಧ ಪಕ್ಷಗಳ ಮೈತ್ರಿಕೂಟ 'INDIA' ಮೂರನೇ ಸಭೆ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಆಮ್ ಆದ್ಮಿ ಪಕ್ಷವು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿತು.

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಕಕ್ಕರ್, ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ಅಭ್ಯರ್ಥಿಯಾಗಬೇಕೆಂದು ನಾನು ಬಯಸುತ್ತೇನೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಣದುಬ್ಬರ ಕಡಿಮೆಯಾಗಿದೆ. ಈ ಸಮಯದಲ್ಲಿಯೂ ದೆಹಲಿಯಲ್ಲಿ ಉಚಿತ ನೀರು, ಉಚಿತ ವಿದ್ಯುತ್, ಉಚಿತ ಶಿಕ್ಷಣ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ವಯೋವೃದ್ಧರಿಗೆ ಉಚಿತ ತೀರ್ಥಯಾತ್ರ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದರ ಹೊರತಾಗಿಯೂ ಹೆಚ್ಚುವರಿ ಬಜೆಟ್ ಮಂಡಿಸಲಾಗಿದೆ. ಕೇಜ್ರಿವಾಲ್ ಅವರು ನಿರಂತರವಾಗಿ ಜನರ ಸಮಸ್ಯೆಗಳನ್ನು ಎತ್ತುತ್ತಿದ್ದಾರೆ. ಅವರು ಪ್ರಧಾನಿ ಮೋದಿಯವರಿಗೆ ಸವಾಲಾಗಿದ್ದಾರೆ ಎಂದು ಕಕ್ಕರ್ ಹೇಳಿದರು.

ಮೇಕ್ ಇಂಡಿಯಾ ನಂ.1 ಮಿಷನ್ ಅಡಿಯಲ್ಲಿ, ನಾವು ದೇಶದಲ್ಲಿ ಸರಕುಗಳನ್ನು ತಯಾರಿಸಬೇಕೆಂದು ಬಯಸುತ್ತೇವೆ. ನಾವು ಸರಕುಗಳನ್ನು ಆಮದು ಮಾಡಿಕೊಳ್ಳುವಾಗ ಹಣದುಬ್ಬರವೂ ಆಮದು ಮಾಡಿಕೊಳ್ಳುತ್ತದೆ ಎಂದು ಪ್ರಧಾನಿ ಮೋದಿ ಕೆಂಪುಕೋಟೆಯಲ್ಲಿ ಹೇಳಿದ್ದರು. ಇದು ಏಕೆ ಸಂಭವಿಸುತ್ತದೆ, ಅವರಿಗೆ ಆರ್ಥಿಕ ಮಿಷನ್ ಇಲ್ಲದಿರುವುದರಿಂದ ಇದು ನಡೆಯುತ್ತಿದೆ. ಇಲ್ಲಿ ಉತ್ಪಾದನೆ ಮೈನಸ್ ಆಗಿ ಹೋಗಿದೆ.

ಕೇಜ್ರಿವಾಲ್ ಅವರ ದೃಷ್ಟಿಯಲ್ಲಿ ಭಾರತವು ಉತ್ಪಾದನಾ ಕೇಂದ್ರವಾಗಲಿದೆ. ವ್ಯಾಪಾರಿಗಳಿಗೆ ಕೆಲಸದ ವಾತಾವರಣ ಸಿಗಲಿದೆ. ಶಿಕ್ಷಣವು ಉನ್ನತ ಮಟ್ಟದಲ್ಲಿ ಇದ್ದರೆ ಮಕ್ಕಳು ಆವಿಷ್ಕರಿಸಲು ಯೋಚಿಸುತ್ತಾರೆ. ಡಾಲರ್ ಖರ್ಚು ಮಾಡಿ ವಿದೇಶಿ ಮಕ್ಕಳು ಓದಲು ಬರುವ ಮಟ್ಟದಲ್ಲಿ ಶಿಕ್ಷಣ ಇರುತ್ತದೆ. ಮೋದಿ ಸರ್ಕಾರ ಕೆಲವು ವ್ಯಾಪಾರಿಗಳಿಗೆ ಸಾವಿರಾರು ಕೋಟಿ ರೂಪಾಯಿ ಮನ್ನಾ ಮಾಡಿದೆ. ಈ ಹಣದಲ್ಲಿ ಎಷ್ಟು ರಾಜ್ಯಗಳಿಗೆ ಉಚಿತ ವಿದ್ಯುತ್ ಸಿಗಬಹುದೆಂದು ಊಹಿಸಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net