

ನವದೆಹಲಿ: ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಚುನಾವಣಾ ಅಖಾಡ ದಿನ ಕಳೆದಂತೆ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳು ತಂತ್ರ-ಪ್ರತಿತಂತ್ರ, ಆಮರಣಾಂತ ಉಪಪಾಸ ಸತ್ಯಾಗ್ರಹ ಆರಂಭಿಸುವುದಾಗಿ ಘೋಷಿಸಿದ್ದು, ಅದಕ್ಕೆ ಕಾರಣವನ್ನು ಉಲ್ಲೇಖಿಸಿದ್ದಾರೆ.
ಈ ಸಂಬಂಧ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ಶೆಹಜಾದ್ ಪೂನಾವಾಲಾ, ಪ್ರೀತಿಯ ಸ್ನೇಹಿತರೇ, ನಾನೇನಾದರೂ ಸತ್ತರೇ ಅದಕ್ಕೆ ಆಮ್ ಆದ್ಮಿ ಪಕ್ಷವೇ (AAP) ಕಾರಣ. ನನ್ನ ವಿರುದ್ಧ ಆಮ್ ಆದ್ಮಿ ಪಕ್ಷವು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದು, ಅದನ್ನು ನಿರೂಪಿಸುವವರೆಗೆ ನಾನು ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಮಾಡುತ್ತೇನೆ ಎಂದು ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ.
ನಾನು ಮುಸ್ಲಿಂ ಎಂಬ ಕಾರಣಕ್ಕೆ ಎಎಪಿ (AAP) ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ಟಿವಿ ಚರ್ಚೆಯ ಸಮಯದಲ್ಲಿ ಚಿತ್ರೀಕರಣವಾದ ವಿಡಿಯೊ ಇದಾಗಿದ್ದು, ಅದನ್ನು ಎಡಿಟ್ ಮಾಡಿ ಅಪಪ್ರಚಾರ ಮಾಡಲಾಗುತ್ತಿದೆ ಎಂದಿರುವ ಅವರು, ಚರ್ಚೆಯ ಸಮಯದಲ್ಲಿ ಹಾಜರಿದ್ದ ಪತ್ರಕರ್ತ ಮತ್ತು ನಿರೂಪಕರನ್ನು ಸಾಕ್ಷಿಗಳಾಗಿ ಉಲ್ಲೇಖಿಸಿದ್ದಾರೆ.
ಎಎಪಿ ನನ್ನ ವಿರುದ್ಧ ಸಂಕಥನ ರಚಿಸುತ್ತದೆ. ಆ ಪಕ್ಷದ ಹಿರಿಯ ನಾಯಕರೇ ಕ್ಲಿಪ್ ಅನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ಈಗ ಊಟ ಮಾಡುವುದನ್ನು ನಿಲ್ಲಿಸುತ್ತೇನೆ. ಎಎಪಿ ಕಚೇರಿಯ ಮುಂದೆ ಮಲಗಲಿದ್ದೇನೆ. ಒಂದೋ ಎಎಪಿ ನನ್ನ ವಿರುದ್ಧದ ಆರೋಪ ಸಾಬೀತುಪಡಿಸಬೇಕು, ಅಥವಾ ಅವರು ನನ್ನಲ್ಲಿ ಕ್ಷಮೆ ಕೇಳಬೇಕು. ಏಕೆಂದರೆ, ಇದು ನನ್ನ, ಕುಟುಂಬ ಮತ್ತು ನನ್ನ ಸಮುದಾಯದ ಮರ್ಯಾದೆಗೆ ಸಂಬಂಧಿಸಿದ ವಿಚಾರ ಎಂದು ಬಿಜೆಪಿ ನಾಯಕ ಶೆಹಜಾದ್ ಪೂನಾವಾಲಾ ಎಎಪಿ (AAP) ವಿರುದ್ಧ ಹರಿಹಾಯ್ದಿದ್ದಾರೆ.