ಗುಂಡು ತಗುಲಿ AAP MLA ಸಾವು; ಆತ್ಮಹತ್ಯೆಯೋ, ಕೊಲೆಯೋ, ಕಾರಣ ಅಸ್ಪಷ್ಟ!

Gurpreet Gogi
Published on

ಅಮೃತಸರ: ಆಕಸ್ಮಿಕವಾಗಿ ಗುಂಡು ತಗುಲಿ ಎಎಪಿ ಶಾಸಕರೊಬ್ಬರು (AAP MLA) ಮೃತಪಟ್ಟಿರುವ ಘಟನೆ ಪಂಜಾಬಿನ ಲುಧಿಯಾನದಲ್ಲಿ ನಡೆದಿದೆ. ಮೃತ ಶಾಸಕನನ್ನು ಗುರುಪ್ರೀತ್ ಗೋಗಿ (58) ಎಂದು ಗುರುತಿಸಲಾಗಿದೆ.

ಘಟನೆಯ ಕುರಿತು ಮಾತನಾಡಿರುವ ಡಿಸಿಪಿ ಜಸ್ಕರಣ್​ ಸಿಂಗ್​ ತೇಜ, ಕುಟುಂಬ ಸದಸ್ಯರು ಹೇಳಿರುವ ಪ್ರಕಾರ ಗುಂಡು ಆಕಸ್ಮಿಕವಾಗಿ ತಲೆಗೆ ತಗುಲಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುರುಪ್ರೀತ್​ (AAP MLA) ಅವರು ಮೃತಪಟ್ಟಿದ್ದಾರೆ.

ದೇಹವನ್ನು ಡಿಎಂಸಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಕುಟುಂಬದವರಿಗೆ ಮೃತದೇಹವನ್ನು ಹಸ್ತಾಂತರಿಸಲಾಗುವುದು. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ಕಾರಣ ಸ್ಪಷ್ಟವಾಗಲಿದೆ ಎಂದು ಡಿಸಿಪಿ ಜಸ್ಕರಣ್​ ಸಿಂಗ್​ ತೇಜ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net