

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ/ಆಪ್) ಶಾಸಕ ನರೇಶ್ ಬಲ್ಯಾನ್ ವಾಟ್ಸಾಪ್‌ನ ಜಾಗತಿಕ ಸ್ಥಗಿತಕ್ಕೆ ಬಿಜೆಪಿಯನ್ನು ದೂಷಿಸಿದ್ದಾರೆ. "ಬಿಜೆಪಿ ಗುಜರಾತ್ ಅನ್ನು ಕಳೆದುಕೊಳ್ಳುತ್ತಿರುವ ಕಾರಣ ವಾಟ್ಸಾಪ್ ಸ್ಥಗಿತಗೊಂಡಿದೆ" ಎಂದು ಆರೋಪಿಸಿದ್ದಾರೆ.
ಆಪ್ ನಾಯಕ ಟ್ವಿಟರ್ನಲ್ಲಿ ವಾಟ್ಸ್ಆ್ಯಪ್ ಸ್ಥಗಿತಗೊಂಡಿದ್ದನ್ನು ವಿಧಾನಸಭಾ ಚುನಾವಣೆ ಜೊತೆ ಸೇರಿಸಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಟ್ವೀಟ್ನಲ್ಲಿ ಬಿಜೆಪಿಯನ್ನು ದೂಶಿಸಿದ ನರೇಶ್ ಬಲ್ಯಾನ್ ‘ಬಿಜೆಪಿ ಗುಜರಾತ್ ಅನ್ನು ಕಳೆದುಕೊಳ್ಳುತ್ತಿದೆ. ಹೀಗಾಗಿ ವಾಟ್ಸಾಪ್ ಸ್ಥಗಿತಗೊಂಡದ್ದು’ ಎಂದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)