More

    ಓಲಾ ತಯಾರಿಸಿದೆ ಬೊಂಬಾಟ್ ಎಲೆಕ್ಟ್ರಿಕ್​ ಕಾರ್; ಬಿಡುಗಡೆಯಾದ ಫೋಟೊಗಳು ಎಲ್ಲೆಡೆ ವೈರಲ್!

    ನವದೆಹಲಿ: ಓಲಾ ಎಲೆಕ್ಟ್ರಿಕ್​ ತನ್ನ ಮೊದಲ ಎಲೆಕ್ಟ್ರಿಕ್​ ಕಾರಿನ ಫೋಟೊಗಳನ್ನು ಬಿಡುಗಡೆ ಮಾಡಿದೆ. ಈ ಕಾರಿನ ಉತ್ಪಾದನೆ 2023ಕ್ಕೆ ಪ್ರಾರಂಭವಾಗಬಹುದು ಎಂದು ಹೇಳಲಾಗುತ್ತಿದೆ.

    ಬಿಡುಗಡೆಗೊಂಡಿರುವ ಫೋಟೊಗಳು ಸರಳ ಹಾಗೂ ಫ್ಯೂಚರಿಸ್ಟಿಕ್​ ಮಾದರಿಯ ಕಾರಿನ ಪರಿಚಯ ಮಾಡಿಸುತ್ತಿವೆ. ಈ ಚಿತ್ರದ ಮೂಲಕ ಕಾರಿನ ಒಳಭಾಗದಲ್ಲಿ ದೊಡ್ಡದಾದ ಟಚ್​ಸ್ಕ್ರೀನ್​ ಪರದೆ ಇರುವುದನ್ನು ತೋರಿಸುತ್ತಿದ್ದು, ಟೆಸ್ಲಾ ಮಾದರಿಯ ಆಯತ ಆಕಾರದ ಸ್ಟೇರಿಂಗ್​ ವೀಲ್ ಹೊಂದಿದೆ.

    ಓಲಾ ಕಂಪೆನಿಯ ಪ್ರಕಾರ ಎಲೆಕ್ಟ್ರಿಕ್​ ವಿಭಾಗದಲ್ಲಿ 0-100 ಕಿ.ಮೀ ವೇಗವನ್ನು ಕೇವಲ 4 ಸೆಕೆಂಡ್​ನಲ್ಲಿ ತಲುಪುವ ಜಗತ್ತಿನ ಮೊದಲ ಕಾರು ಇದಾಗಲಿದೆ. ಈ ಕಾರು ಒಂದು ಬಾರಿ ಚಾರ್ಜ್​ ಮಾಡಿದರೆ 500ಕ್ಕೂ ಹೆಚ್ಚು ಕಿ.ಮೀ ದೂರವನ್ನು ಕ್ರಮಿಸುತ್ತದೆ ಎಂದು ಕಂಪೆನಿ ಹೇಳಿದೆ. ಈ ಮಾಹಿತಿಯನ್ನು ಓಲಾ ಹೇಳಿಕೊಂಡಿದ್ದರೂ ಬ್ಯಾಟರಿ ವ್ಯವಸ್ಥೆ ಹಾಗೂ ತಾಂತ್ರಿಕ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts