More

    ಗೂಳಿ ತಿವಿದು ಕಾರ್ಮಿಕ ಸ್ಥಳದಲ್ಲೇ ಸಾವು

    ಶ್ರೀರಂಗಪಟ್ಟಣ: ತಾಲೂಕಿನ ಮಹದೇವಪುರ ಗ್ರಾಮ ಸಮೀಪದ ತೋಟದ ಮನೆಯಲ್ಲಿ ಸಾಕಿದ್ದ ಗೂಳಿ ಅಚಾನಕ್ ತಿವಿದು ಕೂಲಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಚಾಮರಾಜನಗರ ಜಿಲ್ಲೆ ಯಳಂದೂರಿನ ರಂಗಯ್ಯ(60) ಮೃತ. ತಾಲೂಕಿನ ಮಹದೇವಪುರ ಗ್ರಾಮ ಹೊರವಲದ ರಾಜಪರಮೇಶ್ವರಿ ಅಣೆಕಟ್ಟೆ ಬಳಿ ಇರುವ ಉಡುಪಿ ಮೂಲದ ಉದ್ಯಮಿ ನಿಮಿತ್ ವರ್ಮ ಎಂಬುವರಿಗೆ ಸೇರಿದ ತೋಟದಲ್ಲಿ ಮಂಗಳವಾರ ಈ ದುರಂತ ಸಂಭವಿಸಿದೆ. ರಂಗಯ್ಯ ಕಳೆದ 4 ವರ್ಷಗಳಿಂದ ತೋಟದ ಮಾಲೀಕರು ಸಾಕಿರುವ ಮಿಶ್ರತಳಿಯ ಗೂಳಿಯೊಂದಿಗೆ ಹಸುಗಳ ಸಾಕಣೆಯ ನಿರ್ವಹಣೆ ಜತೆಗೆ ಕೃಷಿಕೂಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡು ತೋಟದ ಮನೆಯಲ್ಲೇ ವಾಸವಿದ್ದನು.

    ಎಂದಿನಂತೆ ಕೊಟ್ಟಿಗೆಯಿಂದ ಹೊರ ಕಟ್ಟಲು ಗೂಳಿಯನ್ನು ಕರೆದೊಯ್ಯುವ ವೇಳೆ ಗೂಳಿ ಆಚಾನಕ್ ಜಗ್ಗಾಡಿದ ವೇಳೆ ಮೂಗುದಾರದ ಹಗ್ಗವು ನಾಲ್ಕು ಸುತ್ತು ರಂಗಯ್ಯನ ದೇಹಕ್ಕೆ ಸುತ್ತಿಕೊಂಡು ದೇಹಕ್ಕೆ ಕೊಂಬು ತಿವಿದು ಆತ ಸ್ಥಳದಲ್ಲೇ ಬಿದ್ದು ಮೃತಪಟ್ಟಿದ್ದಾನೆ. ಗೂಳಿ ಎಲ್ಲೂ ಹೋಗದೆ ಶವದ ಬಳಿಯೇ ನಿಂತಿದ್ದೂ, ಯಾರೂ ಇಲ್ಲದ ಕಾರಣ ವಿಷಯ ಸರಿಯಾಗಿ ತಿಳಿದುಬಂದಿಲ್ಲ ಎಂದು ಸ್ಥಳಿಯರು ತಿಳಿಸಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕೆ ಅರಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲಿಸಿ ಶವವನ್ನು ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಒಪ್ಪಿಸಿದ್ದು, ಮೃತನ ಪತ್ನಿ ಸರಸಮ್ಮ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts