

ಅಮರಾವತಿ: ದೇಶದಲ್ಲಿ ಲೋಕಸಬೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಆಂಧ್ರಪ್ರದೇಶದಲ್ಲಿ ತುಸು ಜೋರು ಎಂದು ಹೇಳಬಹುದಾಗಿದೆ. ರಕ್ತಸಿಕ್ತ ರಾಜಕೀಯಕ್ಕೆ ಹೆಸರುವಾಸಿಯಾಗಿರುವ ಆಂಧ್ರಪ್ರದೇಶದಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ಸಿಪಿ ಪಕ್ಷದ ಶಾಸಕ ಮತಕೇಂದ್ರದಲ್ಲಿ ವೋಟಿಂಗ್ ಮೆಷಿನ್ ಹೊಡೆದು ಹಾಕುವ ಮೂಲಕ ಮತದಾನಕ್ಕೆ ಅಡ್ಡಿಪಡಿಸಿದ್ದಾರೆ.
ಮೇ 13ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವೈಎಸ್ಆರ್ಸಿಪಿ ಶಾಸಕ ಪಿ. ರಾಮಕೃಷ್ಣ ರೆಡ್ಡಿ ಮತಯಂತ್ರವನ್ನು ಹೊಡೆದು ಹಾಕಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇವರ ವಿರುದ್ಧ ಕ್ರಮ ಜರುಗಿಸುವಂತೆ ರಾಷ್ಟ್ರೀಯ ಚುನಾವಣಾ ಆಐಒಗ ಪೊಲೀಸರಿಗೆ ಸೂಚಿಸಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಮಾಚರ್ಲಾ ಕ್ಷೇತ್ರದ ವೈಎಸ್ಆರ್ಸಿಪಿ ಶಾಸಕ ರಾಮಕೃಷ್ಣ ರೆಡ್ಡಿ ಏಳಕ್ಕೂ ಹೆಚ್ಚು ಪೋಲಿಂಗ್ ಸ್ಟೇಷನ್ನಲ್ಲಿ ಇವಿಎಂಗಳನ್ನು ಹೊಡೆದು ಹಾಕುತ್ತಿರುವುದನ್ನು ನೋಡಬಹುದಾಗಿದೆ. ಈ ವೇಳೆ ಮತಕೇಂದ್ರದೊಳಗೆ ನುಗ್ಗುವ ವ್ಯಕ್ತಿಯೊಬ್ಬರು ಶಾಸಕನ ಬೆಂಬಲಿಗನಿಗೆ ಹಿಡಿದು ಥಳಿಸುತ್ತಾರೆ. ಬಳಿಕ ಶಾಸಕ ರಾಮಕೃಷ್ಣ ಅಲ್ಲಿರುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತ ಹೊರನೆಡಯುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟಡಿಪಿ-ಜನಸೇನಾ ಘಟನೆಯನ್ನು ಖಂಡಿಸಿ ಕಿಡಿಕಾರಿದೆ. ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು FIRನಲ್ಲಿ ಶಾಸಕ ರಾಮಕೃಷ್ಣ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಿದ್ದಾರೆ.