More

    ಅಂಜಲಿ ಅಂಬಿಗೇರ ಹತ್ಯೆ ಪ್ರಕರಣ; ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂತು ಅಸಲಿ ಸತ್ಯ

    ಹುಬ್ಬಳ್ಳಿ: ಮೇ 15ರಂದು ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ನಡೆದಿದ್ದ ಅಂಜಲಿ ಅಂಬಿಗೇರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನಿಖೆಯ ಹೊಣೆಯನ್ನು ಸಿಐಡಿಗೆ ವಹಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿರುವ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

    ಇನ್ನೂ ಸಿಐಡಿ ವಿಚಾರಣೆ ವೇಳೆ ಭಯಾನಕ ಸತ್ಯ ಒಂದು ಹೊರಬಂದಿದ್ದು, ಆರೋಪಿ ವಿಶ್ವ ಅಲಿಯಾಸ್​ ಗಿರೀಶ್​ ಅಧಿಕಾರಿಗಳ ಬಳಿ ಅಂಜಲಿ ಕೊಲೆ ಮಾಡಿದರ ಬಗ್ಗೆ ಕಾರಣವನ್ನು ಹೇಳಿದ್ದಾನೆ.

    Anjali Vishwa

    ಇದನ್ನೂ ಓದಿ: ಪೆನ್​​​ಡ್ರೈವ್​ ಪ್ರಕರಣದಲ್ಲಿ ಅಧಿಕಾರ ದುರುಪಯೋಗದ ವಿರುದ್ದ ಕಾನೂನು ಹೋರಾಟ ಮಾಡುತ್ತೇವೆ: ಸಿಎಂಗೆ ಎಚ್ಚರಿಸಿದ ಎಚ್​ಡಿಕೆ

    ನಾನು ಮೊದಲಿಗೆ ಅಂಜಲಿಗೆ ಮೈಸೂರಿಗೆ ಬಾ ಎಂದು ಕರೆದೆ. ಆದರೆ, ಆಕೆ ಬರಲಿಲ್ಲ. ಕೊಲೆಯಾಗುವ ಹಿಂದಿನ ದಿನವೇ ಅಂಜಲಿಗೆ ವಿಶ್ವ 1000 ರೂಪಾಯಿ ಫೋನ್ ಪೇ ಮಾಡಿದ್ದೆ. ಹಣ ಪಡೆದ ಬಳಿಕ ಆಕೆ ನನ್ನನ್ನು ಬ್ಲಾಕ್​ ಮಾಡಿದ್ದಳು. ಅದೇ ಕಾರಣಕ್ಕೆ ಸಿಟ್ಟು ಬಂದು ಕೊಲೆ ಮಾಡಿದ್ದೇನೆ ಎಂದು ವಿಶ್ವ ಸಿಐಡಿ ಅಧಿಕಾರಿಗಳ ಬಳಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

    ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಮೇ 15ರಂದು ನಸುಕಿನಲ್ಲಿ ಅಂಜಲಿ ಹತ್ಯೆ ಮಾಡಲಾಗಿತ್ತು. ಏಪ್ರಿಲ್ 18ರಂದು ನಡೆದಿದ್ದ ನೇಹಾ ಹಿರೇಮಠ ಹತ್ಯೆ ರೀತಿಯಲ್ಲಿಯೇ ಅಂಜಲಿಯನ್ನು ಕೊಲೆ ಮಾಡಲಾಗಿತ್ತು. ಇದಕ್ಕೂ ಮುನ್ನ ಆರೋಪಿಯು ಅಂಜಲಿಗೆ ನೇಹಾ ಕೊಲೆಯಾದಂತೆಯೇ ನಿನ್ನ ಹತ್ಯೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts