More

    ವಯಸ್ಸಾದ್ರೂ ಯಂಗ್​ಸ್ಟರ್!; ಯೌವನ ನೀಡುವ ಜಲಜನಕ

    ಯಂಗ್ ಆಗಿ ಕಾಣಿಸಬೇಕೆಂಬ ಆಸೆ ಬಹುತೇಕರಿಗೆ ಇರುವುದು ಸಹಜ. ಅದನ್ನು ಈಡೇರಿಸಿಕೊಳ್ಳಲು ಬಹಳಷ್ಟು ಪ್ರಯತ್ನ ಮಾಡುತ್ತಾರೆ. ಚರ್ಮದ ಕಾಂತಿಗೆ ವಿವಿಧ ಬಗೆಯ ಕ್ರೀಮ್್ಸ, ತಲೆ ಕೂದಲಿಗೆ ಎಣ್ಣೆ, ಹೇರ್ ಕಲರ್, ಸೀರಂ ಮುಂತಾದ ಸೌಂದರ್ಯವರ್ಧಕಗಳನ್ನು ಬಳಸಿ 30ರಲ್ಲೂ 20 ವರ್ಷದವರಂತೆ ಕಾಣಲು ಸರ್ಕಸ್ ಮಾಡುತ್ತಾರೆ. ಆದರೆ ವಯಸ್ಸೇ ಆಗದಂತೆ ಸದಾ ಯಂಗ್ ಆಗಿ ಇರುವುದು ಹೇಗೆ ಎಂಬುದರ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಈಗ ಚೀನಾದ ವಿಜ್ಞಾನಿಗಳು ಆಂಟಿ ಏಜಿಂಗ್ ಮತ್ತು ರಿವರ್ಸ್ ಏಜಿಂಗ್ ಸಾಧ್ಯವಾಗುವ ಹೊಸ ತಂತ್ರ ಕಂಡುಹಿಡಿದಿದ್ದಾರೆ. ಅದರ ಕುರಿತ ಒಂದಷ್ಟು ವಿವರಗಳು ಇಲ್ಲಿವೆ…

    ಎನ್.ಗುರುನಾಗನಂದನ್​
    ಸದಾ ಯಂಗ್ ಆಂಡ್ ಎನರ್ಜೆಟಿಕ್ ಆಗಿ ಇರುವುದು ಹೇಗೆ ಎಂದು ವೈದ್ಯರ ಬಳಿ ಕೇಳಿದಾಗ ಅವರು ಹೇಳುವುದು ಒಳ್ಳೆಯ ಗುಣಮಟ್ಟದ ಆಹಾರ ಸೇವಿಸಿ, ಮಾನಸಿಕ ಮತ್ತು ಭೌತಿಕ ಆರೋಗ್ಯಕ್ಕೆ ಧ್ಯಾನ, ವ್ಯಾಯಾಮ ಮಾಡಿ ಎಂದು ಹೇಳುತ್ತಾರೆ. ಅವುಗಳನ್ನು ಮಾಡಿದರೂ ವಯಸ್ಸಾಗುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. 40ರಲ್ಲಿ 20 ವರ್ಷದವರಂತೆ ಇರಲು ಆಗುವುದಿಲ್ಲ. ಹಾಗಿರಲು ಉತ್ಸಾಹ ಇರಬಹುದು, ಆದರೆ ದೇಹ ಸ್ಪಂದಿಸುವುದಿಲ್ಲ. ದೇಹಕ್ಕೆ ಹೇಗೆ ವಯಸ್ಸಾಗುತ್ತದೆ ಎಂಬ ಪ್ರಶ್ನೆಗೆ ನಿಖರ ಉತ್ತರ ದೊರೆತಿಲ್ಲ. ಆದರೆ ಚೀನಾ ವಿಜ್ಞಾನಿಗಳ ತಂಡ ಹೈಡ್ರೋಜನ್ ಥೆರಪಿ ಮೂಲಕ ಏಜಿಂಗ್ ನಿಧಾನಗೊಳಿಸಬಹುದು ಎಂದು ಹೇಳಿದ್ದಾರೆ. ಇದರ ಮೂಲಕ ಅಲ್ಝೀಮರ್ಸ್ ಥರದ ವಯಸ್ಸಿಗೆ ಸಂಬಂಧಿಸಿದ ರೋಗಗಳನ್ನೂ ತಡೆಯಬಹುದು ಎಂಬುದು ತಿಳಿದು ಬಂದಿದೆ.

    ಏನಿದು ಹೈಡ್ರೋಜನ್ ಥೆರಪಿ?: ಜಲಜನಕ (ಹೈಡ್ರೋಜನ್) ಅತಿ ಹಗುರವಾದ ರಾಸಾಯನಿಕ ಅಂಶ. ಇದಕ್ಕೆ ಜೀವಕೋಶಗಳ ವಯಸ್ಸನ್ನು ಹಿಮ್ಮುಖಗೊಳಿಸುವ ಮತ್ತು ವಯಸ್ಸಾಗುವಿಕೆಯನ್ನು ನಿಧಾನಗೊಳಿಸುವ ಸಾಮರ್ಥ್ಯವಿದೆ. ಆದರೆ ರಾಸಾಯನಿಕದ ಮೂಲಕ ವಯಸ್ಸನ್ನು ಹಿಂದುಮುಂದುಗೊಳಿಸುವುದು ಹೇಗೆ ಎಂಬ ಪ್ರಶ್ನೆ ಬರಬಹುದು. ಆದರೆ ಇದು ನ್ಯಾನೋತಂತ್ರಜ್ಞಾನದ ಮೂಲಕ ಸಾಧ್ಯ. ಇದರಿಂದ ಜಲಜನಕವನ್ನು 40,000 ಪಟ್ಟು ಪರಿಣಾಮಕಾರಿಯಾಗಿ ಮಾಡಬಹುದು. ಸಾಮಾನ್ಯವಾಗಿ ಕ್ರೀಡಾಪಟುಗಳು ಮತ್ತು ಸಿನಿ ತಾರೆಯರು ಅಲ್ಕಲೈನ್ ಅಥವಾ ಹೈಡ್ರೋಜನ್ ಅಂಶ ಹೆಚ್ಚಾಗಿರುವ ನೀರನ್ನು ಸೇವಿಸುತ್ತಾರೆ. ಇದು ದೇಹದಲ್ಲಿರುವ ಅಸಿಡಿಟಿ ಮಟ್ಟ ನಿಯಂತ್ರಣಕ್ಕೆ ತರುತ್ತದೆ, ವಯಸ್ಸಾಗುವ ಪ್ರಕ್ರಿಯೆ ನಿಧಾನವಾಗುತ್ತದೆ ಮತ್ತು ಕ್ಯಾನ್ಸರ್​ನಂಥ ರೋಗಗಳಿಂದಲ್ಲೂ ದೂರವಿಡುತ್ತದೆ. ಬಹಳ ಒತ್ತಡದಿಂದ ಬಳಲುತ್ತಿದ್ದ ಇಲಿಗಳಿಗೆ ಹೈಡ್ರೋಜನ್ ನೀಡಿದಾಗ ಥೆರಪ್ಯೂಟಿಕ್ ಪರಿಣಾಮ ಬೀರಿ ಒತ್ತಡ ತಗ್ಗಿಸಿತು ಎಂದು ಐರಿಶ್ ಟೈಮ್ಸ್ ವರದಿ ತಿಳಿಸುತ್ತದೆ. ರಾಷ್ಟ್ರೀಯ ಔಷಧೀಯ ಗ್ರಂಥಾಲಯದ ಪ್ರಕಾರ ಹೃದಯರಕ್ತನಾಳ, ಶ್ವಾಸಕೋಶಕ್ಕೆ ಸಂಬಂಧಿತ ಹಲವಾರು ಕಾಯಿಲೆಗಳ ಚಿಕಿತ್ಸೆಯಲ್ಲಿ ಜಲಜನಕ ಬಳಸಬಹುದು.

    Skin Treatment '

    ಜಲಜನಕದಿಂದ ಅಲ್ಝೀಮರ್ಸ್ ದೂರ?: ಅರವತ್ತಕ್ಕೆ ಅರಳು ಮರಳು ಎಂಬ ಮಾತಿದೆ. ವಯಸ್ಸಾಗುತ್ತಿದ್ದಂತೆ ಅರಿವಿನ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ. ಹೈಡ್ರೋಜನ್ ಥೆರಪಿ ಮೂಲಕ ಕೇವಲ ದೈಹಿಕ ಆರೋಗ್ಯದ ಜತೆ ಮಾನಸಿಕವಾಗಿ ಕೂಡ ಫಿಟ್ ಆಗಿ ಇರಲು ಸಾಧ್ಯ. ಅಂದರೆ ಮೆದುಳಿನಲ್ಲಿ ಹಾನಿಗೊಳಗಾದ ಅಂಗಾಂಶಗಳನ್ನು ಸರಿಪಡಿಸುತ್ತದೆ. ಇದರಿಂದ ರಕ್ತ ಮತ್ತು ಆಮ್ಲಜನಕ ಮೆದುಳಿಗೆ ಹೆಚ್ಚಾಗಿ ಸೇರಿ ಆಲೋಚನಾ ಶಕ್ತಿ ವೃದ್ಧಿಸುತ್ತದೆ. ಅಲ್ಝೀಮರ್ಸ್ ರೋಗ ಲಕ್ಷಣಗಳನ್ನು ತಗ್ಗಿಸಲು ಹೈಡ್ರೋಜನ್ ಥೆರಪಿಯಿಂದ ಸಾಧ್ಯ ಹಾಗೂ ಅಡ್ಡಪರಿಣಾಮಗಳು ಕೂಡ ಕಡಿಮೆ. ಆದ್ದರಿಂದ ಹೈಡ್ರೋಜನ್ ಬಳಸುವುದರ ಬಗ್ಗೆ ಬಹಳಷ್ಟು ಪ್ರಯೋಗಗಳು ನಡೆಯುತ್ತಿವೆ. ನಿರ್ಧಿಷ್ಟ ಔಷಧವೇ ಇಲ್ಲದ ಅಲ್ಝೀಮರ್ಸ್​ಗೆ ಜಲಜನಕ ಉಪಯೋಗವಾಗುತ್ತದೆ ಎಂದು ಸಂಶೋಧಕರು ಭಾವಿಸಿದ್ದಾರೆ.

    ಫಿಟ್ ಆಗಿರಲೂ ಸಾಧ್ಯ…: ವಯಸ್ಸಾಗುತ್ತಿದ್ದಂತೆ ಮೂಳೆಗಳು ಕ್ರಮೇಣವಾಗಿ ಸವೆಯುತ್ತವೆ. ಇದರಿಂದ ಪ್ರಾಯದಲ್ಲಿ ಇದ್ದಂತೆ ಕ್ರಿಯಾಶೀಲರಾಗಿರಲು ಆಗುವುದಿಲ್ಲ. ಆದರೆ ಮಹೇಂದ್ರ ಸಿಂಗ್ ಧೋನಿ ಅವರಂತಹ ಹಲವಾರು ಕ್ರೀಡಾಪಟುಗಳು 35-40ರ ವಯಸ್ಸಿನಲ್ಲೂ ಫಿಟ್ ಆಗಿರಲು ಹೇಗೆ ಸಾಧ್ಯ ಎಂದು ಅನಿಸುತ್ತದೆ. ಅವರ ಜೀವನಶೈಲಿ ವಿಭಿನ್ನವಾಗಿರುತ್ತದೆ. ಮಿತವಾದ ಆಹಾರ, ವ್ಯಾಯಾಮದಿಂದ ಮೂಳೆಗಳು ಸವೆಯದಂತೆ ಎಚ್ಚರವಹಿಸುತ್ತಾರೆ. ಆದರೆ ಆಟವಾಡುವಾಗ ದೇಹಕ್ಕೆ ಪೆಟ್ಟು ಬೀಳುವುದು ಸಹಜ. ಅದಾಗ್ಯೂ ಆಟಗಾರರು ಕಡಿಮೆ ಸಮಯದಲ್ಲಿ ಗುಣಮುಖರಾಗಿ ಬರುತ್ತಾರೆ. ಇದಕ್ಕೆ ಎರಡು ಕಾರಣಗಳಿವೆ. ಮೊದಲನೆಯದಾಗಿ ಚಿಕಿತ್ಸೆಯ ಗುಣಮಟ್ಟ ಹೆಚ್ಚಾಗಿರುತ್ತದೆ. ಎರಡನೆಯದಾಗಿ ಚೇತರಿಕೆಯ ಸಮಯ ಹೆಚ್ಚು ಬೇಕಿಲ್ಲ. ಅಂದರೆ ನಮಗೆ ಸಣ್ಣ ಗಾಯವಾದರೆ ಅದರ ನೋವು ಮಾಸಲು ಸಮಯಬೇಕು. ಅದರೊಂದಿಗೆ ಕಲೆ ಉಳಿಯದಂತೆ ಮುಂಚಿನಂತಾಗಲು ಮತ್ತಷ್ಟು ಸಮಯ ತೆಗೆದುಕೊಳ್ಳುತ್ತದೆ. ಈ ಗುಣವಾಗುವ ಸಮಯ ಕಡಿಮೆ ಇದ್ದಷ್ಟೂ ನಾವು ಆರೋಗ್ಯವಾಗಿ ಇದ್ದೇವೆ ಎಂದರ್ಥ. ಹೈಡ್ರೋಜನ್ ಥೆರಪಿ ಮೂಲಕ ಇದು ಸಾಧ್ಯ. ಇದು ಮೂಳೆ-ಮಾಂಸಖಂಡಗಳ ಬೆಳವಣಿಗೆ ಹೆಚ್ಚಿಸುತ್ತದೆ, ಅದರಿಂದ ಉರಿ ಊತವಿದ್ದರೆ ತೀವ್ರಗತಿಯಲ್ಲಿ ಕಮ್ಮಿಯಾಗುತ್ತದೆ. ದೇಹದಲ್ಲಿನ ಅಂಗಗಳನ್ನು ಹೆಚ್ಚಿನ ಕಾಲ ಆರೋಗ್ಯವಾಗಿಡುತ್ತದೆ. ಇದರ ಪರಿಣಾಮ 50 ವರ್ಷವಾದರೂ 25ರ ಯುವಕರಂತೆ ಫಿಟ್ ಆಂಡ್ ಫೈನ್ ಆಗಿರಬಹುದು.

    ವಯಸ್ಸಾದರೂ ಯವ್ವನಿಗರು!: ಹೈಡ್ರೋಜನ್ ಥೆರಪಿ ಕುರಿತು ಇನ್ನೂ ಸಂಶೋಧನೆ ಮುಂದುವರಿದಿದೆ. ಜಲಜನಕ ಬಹಳ ಕಡಿಮೆ ಬೆಲೆಗೆ ಸಿಗುವ ರಾಸಾಯನಿಕ. ಇದನ್ನು ಭಾರತ, ಜಪಾನ್ ಮುಂತಾದ ದೇಶಗಳು ಕ್ಯಾನ್ಸರ್ ಚಿಕಿತ್ಸೆಗೆ ಬಳಸಿ ಯಶಸ್ವಿಯಾಗಿವೆ. ಸರ್ವ ರೋಗಕ್ಕೂ ಹೈಡ್ರೋಜನ್ ಥೆರಪಿ ಮದ್ದು ಎಂಬುದು ಕೆಲವರ ವಾದ. ಇದ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತಿವೆ. ಈ ಥೆರಪಿ ಸರ್ವರಿಗೂ ಸಿಗುವಂತಾದರೆ ವಯಸ್ಸಾಗಿದ್ದರೂ ಸುಲಭದಲ್ಲಿ ಯವ್ವನಿಗರಾಗಿಯೇ ಕಾಣಿಸಬಹುದು ಎಂದೂ ಹೇಳಲಾಗುತ್ತಿದೆ.

    Water

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts