More

    ಶಾಸಕರ ಜನ್ಮದಿನದ ಪ್ರಯುಕ್ತ ರೋಗಿಗಳಿಗೆ ಹಣ್ಣು ವಿತರಣೆ

    ಶ್ರೀರಂಗಪಟ್ಟಣ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಕ್ಷೇತ್ರದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರ 57ನೇ ಜನ್ಮದಿನದ ಪ್ರಯುಕ್ತ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಆಸ್ಪತ್ರೆಯ ರೋಗಿಗಳು ಮತ್ತು ಸಿಬ್ಬಂದಿಗೆ ಹಣ್ಣುಗಳನ್ನು ವಿತರಿಸಿದರು.

    ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಯೂತ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ರಜನಿಕಾಂತ್ ನೇತೃತ್ವದಲ್ಲಿ ಬುಧವಾರ ಹಲವು ಕಾರ್ಯಕರ್ತರು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪಿ.ಮಾರುತಿ ಅವರ ಸಮ್ಮುಖದಲ್ಲಿ ಎಲ್ಲ ವಾರ್ಡುಗಳಲ್ಲಿದ್ದ ಒಳ ಹಾಗೂ ಹೊರರೋಗಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿಗೆ ಸಾಮೂಹಿಕವಾಗಿ ಬ್ರೆಡ್, ಪೌಷ್ಟಿಕ ಆಹಾರದ ಪೊಟ್ಟಣಗಳ ಜತೆಗೆ ಹಣ್ಣು ಹಂಪಲು ವಿತರಿಸಿದರು.

    ಬಳಿಕ ಅಧ್ಯಕ್ಷ ರಜನಿಕಾಂತ್ ಮಾತನಾಡಿ, ಕ್ಷೇತ್ರದ ಎ.ಬಿ.ರಮೇಶ ಬಂಡಿಸಿದ್ದೇಗೌಡ ಅವರು 57ನೇ ವಸಂತಕ್ಕೆ ಕಾಲಿಡುತ್ತಿದ್ದು ಇದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು, ವಿಶ್ವಾಸಿಗಳ ಪಾಲಿಗೆ ಸಂಭ್ರಮದ ದಿನವಾಗಿದೆ. ಕ್ಷೇತ್ರದ ಜನರ ಮನದಲ್ಲಿ ಬಾಬಣ್ಣ ಎಂದೇ ಪ್ರಖ್ಯಾತಿ ಗಳಿಸಿದ ಶಾಸಕರು ಎಲ್ಲ ವರ್ಗದ ಹಾಗೂ ರೈತಾಪಿ ಜನರಿಗೆ ನೆರವಾಗುವ ಜನಾನುರಾಗಿ ನಾಯಕ. ಕ್ಷೇತ್ರದಲ್ಲಿ ತಮ್ಮ ತಂದೆಯ ಆಡಳಿತಾವಧಿಯಿಂದ ತಾಯಿಯ ಹಾದಿಯಾಗಿ ನಡೆಸಿದ ಅಧಿಕಾರದಲ್ಲಿ ಸಾಕಷ್ಟು ಜನಪರ ಯೋಜನೆಗಳನ್ನು ಬಂಡಿಸಿದ್ದೇಗೌಡರ ಕುಟುಂಬ ಕ್ಷೇತ್ರಕ್ಕೆ ತರುವ ಜತೆಗೆ ಜಾರಿಗೊಳಿಸಿ ಸರ್ವತೋಮುಖ ಅಭಿವೃದ್ಧಿ ಕೆಲಸಗಳಿಂದ ಜಿಲ್ಲೆಯ ಮನೆ ಮಾತಗಿದ್ದಾರೆ. ಬಾಬಣ್ಣ ಎಂತಹ ಸಮಯದಲ್ಲೂ ಜನರ, ರೈತರ ಸಮಸ್ಯೆಗಳು ಹಾಗೂ ಕಷ್ಟ ಕಾರ್ಪಣ್ಯಗಳಿಗೆ ನೇರವಾಗಿ ನೆರವಾಗುವ ಸರಳನಾಯಕ. ಅಂತಹ ಶಾಸಕರು ಪ್ರಸ್ತುತ ಸೆಸ್ಕ್ ಅಧ್ಯಕ್ಷರಾಗಿಯೂ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು ಅವರ ಎಲ್ಲ ಕೆಲಸಗಳು ಯಶಗೊಳ್ಳಲಿ ಎಂದು ಹಾರೈಸಿದರು.

    ಪುರಸಭಾ ಮಾಜಿ ಅಧ್ಯಕ್ಷ ಗಂಜಾಂ ನಾಗರಾಜು(ನಾಗಣ್ಣ), ಉಪಾಧ್ಯಕ್ಷ ರವಿ, ಮುಖಂಡರಾದ ಚೇತನ್, ಚಂದ್ರು, ಶಿವು, ರವಿ, ಚಿಂದಗಿರಿಕೊಪ್ಪಲು ಜ್ಞಾನೇಶ್, ಹಳೇ ಸೇತುವೆ ಸತೀಶ್, ಅನ್ಸರ್ ಪಾಷ, ಮೊಬೈಲ್ ಅಂಗಡಿ ಸತೀಶ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts