ಕೊನೆಗೂ ನಿಟ್ಟುಸಿರು ಬಿಟ್ಟ ಆಮೀರ್ ಖಾನ್​!

1223
Published on

ಮುಂಬೈ: ಇತ್ತೀಚೆಗಷ್ಟೇ ಬಾಲಿವುಡ್​ನ ಖ್ಯಾತ ನಿರ್ಮಾಪಕ ಬೋನಿ ಕಪೂರ್​ ಮನೆಯ ಮೂವರು ಕೆಲಸದವರಿಗೆ ಕರೊನಾ ಪಾಸಿಟಿವ್​ ಪತ್ತೆಯಾಗಿತ್ತು. ಅದಾದ ಬಳಿಕ ಕರಣ್​ ಜೋಹರ್​ ಮನೆ ಕೆಲಸದವರಿಗೂ ಸೋಂಕು ಅಂಟಿತ್ತು. ಅವರೆಲ್ಲರೂ ನೇರವಾಗಿ ಟ್ವಿಟರ್ ಮೂಲಕ ಆ ಸುದ್ದಿಯನ್ನು ಬಹಿರಂಗ ಪಡಿಸಿದ್ದರು. ಅದಾದ ಬಳಿಕ ನಟ ಆಮೀರ್ ಖಾನ್​ ಮನೆಯ ಕೆಲಸದವರಿಗೂ ನಿನ್ನೆಯಷ್ಟೇ ಕರೊನಾ ಪಾಸಿಟಿವ್​ ವರದಿಯಾಗಿತ್ತು. ಆ ಹಿನ್ನೆಲೆಯಲ್ಲಿ ಅವರ ತಾಯಿಗೂ ಕರೊನಾ ಪರೀಕ್ಷೆ ನಡೆಸಿದ್ದರು ಆಮೀರ್.

ಹೌದು, ಮಂಗಳವಾರ ಟ್ವಿಟರ್​ನಲ್ಲಿ ಈ ವಿಚಾರ ಹಂಚಿಕೊಂಡ ಅವರು, ‘ನಮ್ಮ ಮನೆಯ ಕೆಲಸದ ಸಿಬ್ಬಂದಿಗೆ ಕೋವಿಡ್​ ಪಾಸಿಟಿವ್​ ಇರುವುದು ದೃಢಪಟ್ಟಿದೆ. ಈಗಾಗಲೇ ಅವರನ್ನು ಕ್ವಾರಂಟೈನ್​ ಮಾಡಲಾಗಿದೆ. ಪಾಲಿಕೆ ಸಹ ನಮ್ಮ ಜತೆ ಕೈ ಜೋಡಿಸಿದೆ. ಅದೇ ರೀತಿ ನಮ್ಮ ತಾಯಿಯನ್ನು ಕೋವಿಡ್​ ಪರೀಕ್ಷೆಗೆ ಕರೆದೊಯ್ಯುತ್ತಿದ್ದೇನೆ. ನೆಗೆಟಿವ್​ ಬರೆಲೆಂದು ಪ್ರಾರ್ಥಿಸುತ್ತಿದ್ದೇನೆ‘ ಎಂದು ಟ್ವಿಟ್​ ಮಾಡಿದ್ದರು.

ಈಗ ಅದರಂತೆ ವರದಿ ಬಂದಿದ್ದು, ನೆಗೆಟಿವ್​ ಎಂದು ದೃಢಪಟ್ಟಿದ್ದು, ಆಮೀರ್ ಖಾನ್​ ನಿಟ್ಟುಸಿರು ಬಿಟ್ಟಿದ್ದಾರೆ. ನಿಮ್ಮ ಪ್ರಾರ್ಥನೆಯಿಂದ ವರದಿ ನೆಗೆಟಿವ್​ ಬಂದಿದೆ. ಧನ್ಯವಾದಗಳು ಎಂದಿದ್ದಾರೆ. ಇನ್ನು ಬಾಲಿವುಡ್​ನ ಹಲವು ಸಿನಿಮಾಮಂದಿಗೆ ಈವರೆಗೂ ಕರೊನಾ ತಗುಲಿದೆ. ಆ ಪೈಕಿ ಬಹುತೇಕರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಅದೇ ರೀತಿ ಒಂದಷ್ಟು ಜನ ಈಗಲೂ ಕ್ವಾರಂಟೈನ್​ನಲ್ಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net