10 ಲಕ್ಷ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಪಡಿತರ ರವಾನೆ: ಆಮ್​ ಆದ್ಮಿ ಪಕ್ಷದ ಪ್ರಣಾಳಿಕೆ ಬಿಡುಗಡೆ

aap feb 04 2020
Published on

ನವದೆಹಲಿ: ಆಮ್​ ಆದ್ಮಿ ಪಕ್ಷ (ಎಎಪಿ) ದೆಹಲಿ ಚುನಾವಣೆ ಹಿನ್ನೆಲೆಯಲ್ಲಿ 10 ಅಂಶ ಹೊಂದಿರುವ ಪ್ರಣಾಳಿಕೆಯನ್ನು ಮಂಗಳವಾರ ಬಿಡುಗಡೆ ಮಾಡಿದೆ.

ಪಕ್ಷದ ಪ್ರಣಾಳಿಕೆಯನ್ನುಉಪ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಅವರು ಬಿಡುಗಡೆ ಮಾಡಿದರು.

ಮನೆ ಬಾಗಿಲಿಗೆ ಪಡಿತರ, ಗುಣಮಟ್ಟದ ಶಿಕ್ಷಣ, ಶಾಲೆಗಳಲ್ಲಿ ದೇಶಭಕ್ತಿ ಪಠ್ಯ ಅಳವಡಿಕೆ ಪ್ರಣಾಳಿಕೆಯಲ್ಲಿರುವ ಪ್ರಮುಖ ಭರವಸೆಗಳು.

ಉಪ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಮಾತನಾಡಿ, ಪಕ್ಷ ಆಹಾರ ಹಾಗೂ ಶುದ್ಧ ಕುಡಿಯುವ ನೀರು ಒದಗಿಸಲು ಬದ್ಧತೆ ಹೊಂದಿದೆ. ಅಲ್ಲದೆ ದೆಹಲಿ ಜನರಿಗೆ 24 ತಾಸು ವಿದ್ಯುತ್​ ಪೂರೈಕೆ ಮಾಡಲಿದೆ ಎಂದು ಹೇಳಿದರು.

10 ಲಕ್ಷ ಮಂದಿ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಪಡಿತರ ರವಾನೆಯಾಗಲಿದೆ, ಯುವಕರು, ಮಹಿಳೆ ಹಾಗೂ ಜನ ಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ತಯಾರಿಸಲಾಗಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​, ಮುಖಂಡರಾದ ಗೋಪಾಲ್ ರೈ, ಸಂಜಯ್ ಸಿಂಗ್, ಜಾಸ್ಮಿನ್ ಶಾ ಮತ್ತು ಡಾ.ಅಜಯ್​ ಕುಮಾರ್ ಇದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net