ಹಿರಿಯ ನಾಗರಿಕರು, ಅಂಗವಿಕಲರಿಗೆ ಆಧಾರ್ ಸೀಡಿಂಗ್‌ನಿಂದ ಅಂಚೆ ಖಾತೆಗೆ ಹಣ

18ldh1a
ಲಿಂಗದಹಳ್ಳಿ ಅಂಚೆ ಕಚೇರಿಯಲ್ಲಿ ಅಂಚೆ ಉಳಿತಾಯ ಖಾತೆದಾರರಿಗೆ ಉಚಿತವಾಗಿ ಆಧಾರ್ ಸೀಡಿಂಗ್ ಮಾಡಿಕೊಡಲಾಯಿತು. ಅಂಚೆ ನಿರೀಕ್ಷಕ ನವೀನ್‌ಕುಮಾರ್, ಉಪ ಅಂಚೆ ಪಾಲಕ ನಾರಾಯಣ ನಾಯ್ಕ ಇತರಿದ್ದರು.
Published on

ಲಿಂಗದಹಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿರಿಯ ನಾಗರಿಕರು, ಮಹಿಳೆಯರು, ಅಂಗವಿಕಲರು ಸೇರಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಚಿಕ್ಕಮಗಳೂರು ವಿಭಾಗದ ಅಂಚೆ ನಿರೀಕ್ಷಕ ನವೀನ್‌ಕುಮಾರ್ ತಿಳಿಸಿದರು.
ಮಂಗಳವಾರ ಲಿಂಗದಹಳ್ಳಿ ಅಂಚೆ ಕಚೇರಿಯಲ್ಲಿ ವಿವಿಧ ಸಾಮಾಜಿಕ ಭದ್ರತಾ ವೇತನದ ಯೋಜನೆಗಳನ್ನು ಪಡೆಯುವ ಫಲಾನುಭವಿಗಳಿಗೆ ನಡೆದ ಆಧಾರ್ ಸೀಡಿಂಗ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಚೆ ಇಲಾಖೆ, ಇತರೆಡೆಗಳಲ್ಲಿ ಉಳಿತಾಯ ಖಾತೆಗಳನ್ನು ತೆರೆಯುತ್ತಿದ್ದಾರೆ. ಕೆಲವರು ಬೇರೆ ಬೇರೆ ಉಳಿತಾಯ ಖಾತೆಗಳನ್ನು ಹೊಂದಿರುವ ಕಾರಣ ಸರ್ಕಾರದ ಸೌಲಭ್ಯಗಳು ಯಾವ ಖಾತೆಗೆ ಜಮೆಗೊಳ್ಳುತ್ತಿವೆ ಎಂದು ತಿಳಿಯಲು ಪರದಾಡುತ್ತಿದ್ದಾರೆ. ಇದನ್ನು ತಪ್ಪಿಸಲು ನೇರವಾಗಿ ಮನೆಗಳಿಗೇ ಅಂಚೆ ಇಲಾಖಾ ಉಳಿತಾಯ ಖಾತೆಗಳಿಗೆ ಆಧಾರ್ ಸೀಡಿಂಗ್ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗುತ್ತಿದೆ. ಅರ್ಹರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಉಪ ಅಂಚೆ ಪಾಲಕ ನಾರಾಯಣ ನಾಯ್ಕ ಮಾತನಾಡಿ, ಹೋಬಳಿಯಾದ್ಯಂತ ಇರುವ ಅಂಚೆ ಉಳಿತಾಯ ಖಾತೆದಾರರಿಗೆ ಆಧಾರ್ ಸೀಡಿಂಗ್ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. 553 ಫಲಾನುಭವಿಗಳಿಗೆ ಆಧಾರ್ ಸೀಡಿಂಗ್ ಮಾಡಲಾಗಿದೆ ಎಂದು ತಿಳಿಸಿದರು.
ವಿವಿಧೆಡೆಯ ಅಂಚೆ ಪಾಲಕರಾದ ಎಂ.ಪಂಚಾಕ್ಷರಿ , ತ್ರಿಮೂರ್ತಿ, ವಿನುತಾ, ಎಸ್.ಕೆಂಪಯ್ಯ, ಹನುಮಂತಪ್ಪ, ಎಚ್.ಮಂಜುನಾಥ್, ಎಚ್.ಹನುಮಂತ ಆಡೂರು, ಗುರುಮೂರ್ತಿ , ಎನ್.ಎಸ್.ಪರಮೇಶ್ವರಪ್ಪ, ಚಿಕ್ಕಮಗಳೂರು ಅಂಚೆ ನಿರೀಕ್ಷಕರ ಕಚೇರಿಯ ಸಹಾಯಕ ವಸಂತಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net